ದಾವಣಗೆರೆ: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‍ಎಎಲ್) ಬೆಂಗಳೂರು ಇಲ್ಲಿ ಐಟಿಐ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗಾಗಿ ಒಂದು ವರ್ಷದ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಎಸ್.ಎಸ್.ಎಲ್.ಸಿ.ಯಲ್ಲಿ ಶೇ.70%, ಐಟಿಐ(ಸಿಟಿಎಸ್) ಶೇ.30 ಅಂಕ ಪಡೆದ ಫಿಟ್ಟರ್, ಟರ್ನರ್, ಮಷಿನಿಸ್ಟ್, ಎಲೆಕ್ಟ್ರೀಷಿಯನ್, ವೆಲ್ಡರ್, ಸಿಒಪಿಎ, ಫೌಂಡ್ರಿಮನ್, ಶೀಟ್ ಮೆಟಲ್ ವರ್ಕರ್, ಕಾರ್ಪೆಂಟರ್, ಟೂಲ್ & ಡೈ ಮೇಕರ್, ಮೆಕಾನಿಕ್ ಅರ್&ಎಸಿ ಅಡ್ವಾನಸ್ಡ್ ಸಿಎನ್‍ಸಿ ಮಷನಿಂಗ್, ಕ್ರಾಫ್ಟ್ಸ್‍ಮನ್ ಟ್ರೈನಿಂಗ್ ಸ್ಕೀಮ್ ಸಿಟಿಎಸ್ ಇವುಗಳಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ದಿ: 30-12-2023 ಕಡೆಯ ದಿನವಾಗಿರುತ್ತದೆ. ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್, ಪೋರ್ಟಲ್ ರಿಜಿಸ್ಟ್ರೇಷನ್ ಸಂಖ್ಯೆ, ಎಂಪ್ಲಾಯ್‍ಮೆಂಟ್ ಕಾರ್ಡ್, ಪಾಸ್‍ಪೋರ್ಟ್ ಸೈಜಿನ 4 ಪೋಟೋಗಳು ಈ ಎಲ್ಲಾ ದಾಖಲೆಗಳ ಮೂಲ ಪ್ರತಿ ಹಾಗೂ 2 ಸೆಟ್ ಜೆರಾಕ್ಸ್ ಪ್ರತಿಯನ್ನು ನೇರವಾಗಿ ತಾಂತ್ರಿಕ ತರಬೇತಿ ಸಂಸ್ಥೆ, ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ., ಸುರಂಜನ್ ದಾಸ್ ರಸ್ತೆ, ವಿಮಾನಪುರ ಅಂಚೆ, ಬೆಂಗಳೂರು-560017 ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.
ಅರ್ಜಿ ನಮೂನೆಯನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ದಾವಣಗೆರೆ ಇಲ್ಲಿ ಅಥವಾ ಆನ್‍ಲೈನ್ ಮೂಲಕ ಪಡೆದುಕೊಂಡು, www.apprenticeshipindia.org/candidate-registration ಈ ವೆಬ್‍ಸೈಟ್‍ನಲ್ಲಿ ನೋಂದಾಯಿಸಿ, ನೋಂದಣಿ ಸಂಖ್ಯೆಯನ್ನು ಅರ್ಜಿಯಲ್ಲಿ ನಮೂದಿಸಿ, ಅರ್ಜಿ ಸಲ್ಲಿಸಬಹುದಾಗಿದೆ . ಅರ್ಜಿ ಸಲ್ಲಿಸುವ ಕೊನೆಯ ಡಿ.30 ಕೊನೆಯ ದಿನ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾ ಆಡಳಿತ ಭವನ, ದಾವಣಗೆರೆ ದೂರವಾಣಿ ಸಂಖ್ಯೆ: 08192-259446ಇವರುಗಳನ್ನು ಸಂಪರ್ಕಿಸಲು ಉದ್ಯೋಗಾಧಿಕಾರಿ ರವೀಂದ್ರ.ಡಿ. ತಿಳಿಸಿದ್ದಾರೆ.



