ಬೆಂಗಳೂರು: ಸಾರ್ವಜನಿಕರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆ, ಸೇವೆಗಳ ಅರ್ಜಿ ಸಲ್ಲಿಸಲು ಗ್ರಾಮ ಮಟ್ಟದಲ್ಲಿ ಸೂಕ್ತ ಸೇವೆಯನ್ನು ಒದಗಿಸಲು ವಿವಿಧ ಜಿಲ್ಲೆಗಳಲ್ಲಿ ಗ್ರಾಮ ಒನ್ ಕ ಶಾಖೆಗಳನ್ನು ತೆರೆಯಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ: ಅಡಿಕೆ ಬೆಲೆಯಲ್ಲಿ ಮತ್ತೆ ಚೇತರಿಕೆ; ಇಂದಿನ ಬೆಲೆ ಎಷ್ಟು.?
ಎಲ್ಲೆಲ್ಲಿ ಅರ್ಜಿ ಆಹ್ವಾನ..?
ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆ, ಹಾಸನ, ಕಲಬುರಗಿ, ಕೊಡಗು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲೂಕಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೊಡಗಿನಲ್ಲಿ ಮಡಿಕೇರಿ, ಪೊನ್ನಂಪೇಟೆ, ವಿರಾಜಪೇಟೆ ಮತ್ತು ಸೋಮವಾರ ಪೇಟೆ ತಾಲೂಕುಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಸರ್ಕಾರದಿಂದ ಇಡಿಸಿಎಸ್ ನಿರ್ದೇಶನಾಲಯದಿಂದ (ಇ-ಆಡಳಿತ) ವಿವಿಧ ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರ ಆರಂಭಿಸಲು ಶಾಖೆಗಳನ್ನು ತೆರೆಯಬಹುದು. ಗ್ರಾಮ ಒನ್ ಕೇಂದ್ರವನ್ನು ತೆರೆಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಈ ಲಿಂಕ್ https://www.karnatakaone.gov.in/Public/GramOneFranchiseeTerms ಮೂಲಕ ಸಲ್ಲಿಸಬಹುದು.
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
- ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಕನಿಷ್ಠ ದ್ವಿತೀಯ ಪಿಯುಸಿ ಓದಿರಬೇಕು
- ಅವಶ್ಯವಿರುವ ಬಂಡವಾಳ ಹೂಡಿಕೆಗೆ ಸಿದ್ದವಿರಬೇಕು
- ಪ್ರಾರಂಭಿಸಲು ಇಚ್ಚಿಸಿರುವ ಜಾಗವು ಸಾರ್ವಜನಿಕರಿಗೆ ಸುಲಭವಾಗಿ ಸಂಪರ್ಕಿಸುವಂತಿರಬೇಕು
ಅರ್ಜಿದಾರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಗ್ರಾಮ ಒನ್ ಕೇಂದ್ರ ತೆರೆಯಲು ಅನುಮೋದನೆ ಪಡೆದ ಬಳಿಕ ಕೇಂದ್ರವನ್ನು ಆರಂಭಿಸಲು ಈ ಕೆಳಗಿನ ವಸ್ತುಗಳನ್ನು ಖರೀದಿಸಬೇಕಾಗುತ್ತದೆ.
ಅವಶ್ಯವಿರುವ ಉಪಕರಣಗಳು
- ಲ್ಯಾಪ್ ಟಾಪ್/ಡೆಸ್ಕ್ ಟಾಪ್
- ಪ್ರಿಂಟರ್
- ಬಯೋಮೆಟ್ರಿಕ್ ಸ್ಕ್ಯಾನರ್
- ವೆಬ್ ಕ್ಯಾಮರಾ
- ವೈ-ಪೈ ರಿಸೀವರ್
- ಯುಪಿಎಸ್ ಬ್ಯಾಕಪ್
ಅರ್ಜಿ ಸಲ್ಲಿಸಲು ಬೇಕಾಗದ ದಾಖಲೆ
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಅಂಗಡಿಯ ಪೋಟೋ
- ವಿದ್ಯಾರ್ಹತೆ ದಾಖಲೆ



