ಬೆಂಗಳೂರು: ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ (Land conversion) ಮಾಡುವ ಅಗತ್ಯವಿಲ್ಲ. ಸ್ವಂತ ಜಮೀನಿನಲ್ಲಿ ಶೇ.10ರಷ್ಟು ಮನೆಗಳನ್ನು ಕಟ್ಟಿಕೊಳ್ಳಲು ಅವಕಾಶವಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ರಾಜ್ಯದ ಜನತೆಗೆ ಸರ್ಕಾರದಿಂದ ಶಾಕ್ ; ಪ್ರತಿ ಯೂನಿಟ್ ವಿದ್ಯುತ್ ಗೆ 36 ಪೈಸೆ ಹೆಚ್ಚಳ ಮಾಡಿ ಆದೇಶ
- ಕೃಷಿ ಭೂಮಿ ಇದ್ದರೆ ಮಾತ್ರ ಭೂ ಪರಿವರ್ತನೆ ಅವಶ್ಯಕ
- ಗ್ರಾಮ ಠಾಣಾ ವ್ಯಾಪ್ತಿಯಲ್ಲಿದ್ರೆ ಭೂ ಪರಿವರ್ತನೆ ಅಗತ್ಯವಿಲ್ಲ
- ಸ್ವಂತ ಜಮೀನಿನಲ್ಲಿ ಶೇ.10ರಷ್ಟು ಜಾಗದಲ್ಲಿ ಮನೆಗಳನ್ನು ಕಟ್ಟಿಕೊಳ್ಳಲು ಅವಕಾಶ, ಬಡಾವಣೆ ನಿರ್ಮಿಸಲು ಆಗದು
- ಸರ್ವೆ ನಂಬರ್‌ಗಳಲ್ಲಿ ಮನೆ ಕಟ್ಟಿಕೊಂಡುವರಿಗೆ ನಿಯಮಾನುಸಾರ ಕ್ರಮ
- 2013ರ ಜೂನ್ 14ಕ್ಕೂ ಮೊದಲು ಹಾಗೂ ನಂತರ ನೋಂದಣಿಯಾದ ಎಲ್ಲಾ ನಿವೇಶನಗಳು ಮತ್ತು ಕಟ್ಟಡಗಳಿಗೆ ಇ-ಸ್ವತ್ತು
ವಿಧಾನಪರಿಷತ್‍ನ ಪ್ರಶೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಜವರಾಯಿಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ವಸತಿ ಪ್ರದೇಶ ಇರುವ ಕಡೆ ಭೂ ಪರಿವರ್ತನೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ನೇರವಾಗಿ ಯೋಜನಾ ನಕ್ಷೆ ಮಂಜೂರಾತಿಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಮಾ.22ರಿಂದ ಎರಡ್ಮೂರು ದಿನ ಗುಡುಗು ಸಹಿತ ಮಳೆ ಮುನ್ಸೂಚನೆ
ಕೃಷಿ ಭೂಮಿ ಇದ್ದರೆ ಮಾತ್ರ ಭೂ ಪರಿವರ್ತನೆ ಮಾಡಬೇಕಾಗುತ್ತದೆ. ಸ್ವಂತ ಜಮೀನಿನಲ್ಲಿ ಶೇ.10ರಷ್ಟು ಮನೆಗಳನ್ನು ಕಟ್ಟಿಕೊಳ್ಳಲು ಅವಕಾಶವಿದೆ. ಆದರೆ, ಬಡಾವಣೆ ನಿರ್ಮಾಣಕ್ಕೆ ಅವಕಾಶವಿಲ್ಲ. ಈ ಸಮಸ್ಯೆ ನಿವಾರಣೆಗೆ ಬಿ ಖಾತೆ ಕೊಡುವ ವಿಧೇಯಕವನ್ನು ತರಲಾಗುತ್ತಿದ್ದು, ಈಗಾಗಲೇ ವಿಧಾನಸಭೆಯಲ್ಲಿ ಮಂಡಿಸಲಾಗಿದೆ ಎಂದರು.
ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮ ಠಾಣಾ ಹಾಗೂ ಊರುಗುಪ್ಪೆ ಸರ್ವೆ ನಂಬರ್‌ಗಳಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ನಿವಾಸಿಗಳಿಗೆ ಸಂಬಂಧಿಸಿದ ಹಕ್ಕುಪತ್ರ ನೀಡುವ ಬಗ್ಗೆ ಗ್ರಾ.ಪಂ.ಗಳಿಂದ ನಿಯಮಾನುಸಾರ ಕ್ರಮ ವಹಿಸಲಾಗುತ್ತದೆ. ಕಂದಾಯ ಇಲಾಖೆಗೆ ಸೇರಿದ ಸರ್ವೇ ನಂಬರ್ ಅಥವಾ ಜಮೀನುಗಳಲ್ಲಿ ಭೂ ಕಂದಾಯ ಕಾಯ್ದೆಯಡಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
2013ರ ಜೂನ್ 14ಕ್ಕೂ ಮೊದಲು ಹಾಗೂ ನಂತರ ನೊಂದಣಿಯಾದ ಎಲ್ಲಾ ನಿವೇಶನಗಳು ಮತ್ತು ಕಟ್ಟಡಗಳಿಗೆ ಇ-ಸ್ವತ್ತು ತಂತ್ರಾಂಶಗಳ ಮೂಲಕ ಖಾತೆ ನೀಡಲು ಕ್ರಮ ವಹಿಸಲಾಗಿದೆ. ಗ್ರಾಮ ಠಾಣಾಗಳಿಗೆ ಸಂಬಂಧಿಸಿದಂತೆ ಸರ್ವೆ ನಂಬರ್‌ನಲ್ಲಿರುವ ಸ್ವತ್ತು ಪಹಣಿಯಲ್ಲಿ ಗ್ರಾಮಸ್ಥರು ಎಂದು ಬಾರದಿದ್ದರೆ ಪುನಃ ಪಹಣಿ ತರುವ ಅವಶ್ಯಕತೆ ಇಲ್ಲ. ಪಹಣಿಯಲ್ಲಿ ಮಾಲಕರ ಹೆಸರು ಇದ್ದರೆ ಮಾತ್ರ ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಬಹುದು. ಗ್ರಾಮ ಠಾಣಾ ಊರುಗುಪ್ಪೆ ಸರ್ವೆ ನಂಬರ್‌ನಲ್ಲಿರುವ ಸ್ವತ್ತು ಆರ್ ಟಿಸಿಯಲ್ಲಿ ಗ್ರಾಮಸ್ಥರೆಂದು ದಾಖಲಾಗಿದ್ದರೆ ಭೂ ಪರಿವರ್ತಿಸಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.