ದಾವಣಗೆರೆ: 2020-21 ನೇ ಸಾಲಿನಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ, ವಿಶೇಷ ಘಟಕಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಉಚಿತವಾಗಿ ವಿವಿಧ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
18 ರಿಂದ 35 ವರ್ಷದೊಳಗಿನ ನಿರುದ್ಯೋಗಿ ಯುವಕ/ಯುವತಿಯರಿಗಾಗಿ ಉದ್ಯೋಗಾವಕಾಶ ಕಲ್ಪಿಸಲು ಹಾಗೂ ಎಸ್‍ಎಸ್.ಎಲ್.ಸಿ/ಐ.ಟಿ.ಐ/ಡಿಪ್ಲೋಮ/ಬಿ.ಇ ಪಾಸ್ ಆಗಿರುವ ಅಭ್ಯರ್ಥಿಗಳಿಗೆ 2 ತಿಂಗಳ ಅವಧಿಗೆ ತರಬೇತಿ ನೀಡಲಾಗುವುದು. ಜೊತೆಗೆ ಉದ್ಯೋಗಾವಕಾಶವನ್ನು ಕಲ್ಪಿಸಲಾಗುವುದು. ತರಬೇತಿಯ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶಿಷ್ಯವೇತನ ನೀಡಲಾಗುವುದು. ತರಬೇತಿಗೆ ಅರ್ಜಿ ಸಲ್ಲಿಸಲು ಫೆ.28 ಕಡೆಯ ದಿನವಾಗಿದೆ.
ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್, ಸಿ.ಎನ್.ಸಿ ಆಪರೇಟರ್ ಟರ್ನಿಂಗ್, ಸಿ.ಎನ್.ಸಿ ಪ್ರೋಗ್ರಾಮರ್, ಕನ್ವೆನ್ಷನಲ್ ಟರ್ನಿಂಗ್ ಮಷಿನ್ ಆಪರೇಟರ್, ಮಿಲ್ಲಿಂಗ್ ಮಷಿನ್ ಆಪ್‍ರೇಟರ್, ಸರ್ಫೇಸ್‍ಗ್ರೈಂಡಿಂಗ್ ಮಷಿನ್ ಆಪರೇಟರ್ ಈ ತರಬೇತಿಗಳಿಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿರಬೇಕು.
ಡಿಸೈನರ್-ಮೆಕ್ಯಾನಿಕಲ್ ಮತ್ತು ಪ್ರೊಡಕ್ಷನ್ ಇಂಜಿನಿಯರ್ ತರಬೇತಿಗಳಿಗೆ ಡಿಪ್ಲೋಮ/ಬಿ.ಇ ವಿದ್ಯಾರ್ಹತೆ ಹೊಂದಿದ್ದು, ಈ ಎಲ್ಲಾ ತರಬೇತಿ ಮುಗಿದ ನಂತರ ಉದ್ಯೋಗಾವಕಾಶಕ್ಕೆ ಮಾರ್ಗದರ್ಶನ ನೀಡಲಾಗುವುದು. ಹೆಚ್ಚಿನ ವಿವರಗಳಿಗಾಗಿ ಪ್ರಾಂಶುಪಾಲರು, ಜಿ.ಟಿ.ಟಿ.ಸಿ, 22 ಸಿ & ಡಿ, ಕೆಐಎಡಿಬಿ, ಇಂಡಸ್ಟ್ರಿಯಲ್ ಏರಿಯ ಹರ್ಲಾಪುರ, ಕೆಎಸ್‍ಆರ್‍ಟಿಸಿ ಡಿಪೋ ಹತ್ತಿರ, ಹರಿಹರ. ದೂ.ಸಂ: 08192243937, 9916908111, 8884488202, 871191397 ನ್ನು ಸಂಪರ್ಕಿಸಬಹುದೆಂದು ಜಿಟಿಟಿಸಿ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



