ಬೆಂಗಳೂರು: ಗೌರಿ ಹಾಗೂ ಗಣೇಶ ಹಬ್ಬಕ್ಕೆ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಕೆಎಸ್ ಆರ್ ಟಿಸಿ ಒಂದು ಸಾವಿರ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಕಲ್ಪಿಸಿದೆ.
ಪ್ರಯಾಣಿಕರು ಮುಂಗಡವಾಗಿ ಕಾಯ್ದಿರಿಸಲಯ ಕೆಎಸ್ ಆರ್ ಟಿಸಿ ಅವಕಾಶ ಕಲ್ಪಿಸಿದ್ದು, ಗಿ ಇ-ಟಿಕೆಟ್ ಗಳನ್ನು https://ksrtc.karnataka.gov.in/ ವೆಬ್ ಸೈಟಿ ಮೂಲಕ ಬುಕ್ ಮಾಡಿಕೊಳ್ಳಬಹುದಾಗಿದೆ. ಈ ವಿಶೇಷ ಬಸ್ ಗಳು ಬೆಂಗಳೂರಿನ ಕೆಂಪೇಗೌಡ ನಿಲ್ದಾಣದಿಂದ ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ ,ಧರ್ಮಸ್ಥಳ, ಕುಂದಾಪುರ ,ಮಂಗಳೂರು, ಶೃಂಗೇರಿ , ಹೊರನಾಡು, ದಾವಣಗೆರೆ ,ಕಲ್ಬುರ್ಗಿ, ರಾಯಚೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ ಕೊಪ್ಪಳ, ತಿರುಪತಿ, ಬೀದರ್ ಮತ್ತು ಇನ್ನಿತರ ಸ್ಥಳಗಳಿಗೆ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಹುಣಸೂರು, ಮೈಸೂರು ,ಪಿರಿಯಪಟ್ಟಣ, ಕುಶಾಲನಗರ ,ಮಡಿಕೇರಿ, ವಿರಾಜಪೇಟೆ ಪ್ರಯಾಣಿಸಲಿವೆ. ಶಾಂತಿನಗರ ಬೆಂಗಳೂರು ಮಹಾ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ತಮಿಳುನಾಡು ಮತ್ತು ಆಂಧ್ರಪ್ರದೇಶ, ತೆಲಂಗಾಣ ಮಾರ್ಗದ ಕಡೆಗೆ ಚಲಿಸುವ ಬಸ್ ವ್ಯವಸ್ಥೆಗಳನ್ನು ಕೆ ಎಸ್ ಆರ್ ಟಿ ಸಿ ಕಲ್ಪಿಸಿದೆ. ಪ್ರಯಾಣದ ವೇಳೆ ಕೋವಿಡ್ ನಿಯಮ ಪಾಲಿಸುವಂತೆ ಸೂಚನೆ ನೀಡಿದೆ.



