Connect with us

Dvgsuddi Kannada | online news portal | Kannada news online

ಹಿಂದುಳಿದ ವರ್ಗಗಳ 91 ವರ್ಗಗಳ ಕಾರ್ಮಿಕರಿಗೆ ಉಚಿತ ಸ್ಮಾರ್ಟ್ ಕಾರ್ಡ್ ಗೆ ಅರ್ಜಿ ಆಹ್ವಾನ; ಯಾರೆಲ್ಲಾ ಈ ಸೌಲಭ್ಯ ಪಡೆಯಬಹುದು..?

smart card 1

ಪ್ರಮುಖ ಸುದ್ದಿ

ಹಿಂದುಳಿದ ವರ್ಗಗಳ 91 ವರ್ಗಗಳ ಕಾರ್ಮಿಕರಿಗೆ ಉಚಿತ ಸ್ಮಾರ್ಟ್ ಕಾರ್ಡ್ ಗೆ ಅರ್ಜಿ ಆಹ್ವಾನ; ಯಾರೆಲ್ಲಾ ಈ ಸೌಲಭ್ಯ ಪಡೆಯಬಹುದು..?

ದಾವಣಗೆರೆ: ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಪ್ರಾರಂಭಿಕವಾಗಿ 26 ವರ್ಗಗಳ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಲಾಗುತ್ತಿತ್ತು, ಹೊಸದಾಗಿ ಹಿಂದುಳಿದ ವರ್ಗಗಳ ಪ್ರವರ್ಗ-1,2ಎ, ಮತ್ತು 3ಬಿ ಗೆ ಸೇರಿದ ಪಾರಂಪರಿಕ ವೃತ್ತಿಯಲ್ಲಿ ತೊಡಗಿರುವ 38 ವರ್ಗಗಳು ಹಾಗೂ ಹಿಂದುಳಿದ ವರ್ಗಗಳ ಅಲೆಮಾರಿ ಹಾಗೂ ಅರೆಅಲೆಮಾರಿ ಪಂಗಡದ ಕುಲಕಸುಬಿನಲ್ಲಿ ತೊಡಗಿರುವ 27 ವರ್ಗಗಳ ಕಾರ್ಮಿಕರು ಸೇರಿದಂತೆ ಒಟ್ಟಾರೆ 91 ವರ್ಗಗಳ ಕಾರ್ಮಿಕರನ್ನು ಉಚಿತವಾಗಿ ನೋಂದಾಯಿಸಿ ಸೌಲಭ್ಯಗಳನ್ನೊಳಗೊಂಡ ಸ್ಮಾರ್ಟ್ ಕಾರ್ಡ್  (Labor Smart Card) ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ನೋಂದಣಿಗೆ ಅರ್ಹ ಕಾರ್ಮಿಕರಲ್ಲಿ ಪ್ರಾರಂಭಿಕವಾಗಿ ಗುರುತಿಸಲಾದ 26 ವರ್ಗಗಳ ಅಸಂಘಟಿತ ಕಾರ್ಮಿಕರ ಪಟ್ಟಿ ಹಮಾಲರು, ಟೈಲರ್‌ಗಳು, ಗೃಹ ಕಾರ್ಮಿಕರು, ಅಗಸರು, ಚಿಂದಿ ಆಯುವವರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಭಟ್ಟಿ ಕಾರ್ಮಿಕರು, ಸಿನಿ ಕಾರ್ಮಿಕರು, ನೇಕಾರರು, ಬೀದಿಬದಿ ವ್ಯಾಪಾರಿಗಳು, ಹೊಟೇಲ್ ಕಾರ್ಮಿಕರು, ಫೋಟೋಗ್ರಾಫರ್‌ಗಳು, ಸ್ವತಂತ್ರ ಲೇಖನ ಬರಹಗಾರರು, ಬೀಡಿ ಕಾರ್ಮಿಕರು, ಅಸಂಘಟಿತ ವಿಕಲಚೇತನ ಕಾರ್ಮಿಕರು, ಅಲೆಮಾರಿ ಪಂಗಡದ ಕಾರ್ಮಿಕರು, ಹಗ್ಗ ಸಿದ್ಧಪಡಿಸುವ (ಬೈಜಂತ್ರಿ)ಕಾರ್ಮಿಕರು, ಉಪ್ಪನ್ನು ತಯಾರಿಸುವ ಉಪ್ಪಾರರು, ಬಿದಿರು ವೃತ್ತಿಯಲ್ಲಿರುವ ಮೇದಾರರು, ಚಪ್ಪಲಿ ತಯಾರಿಕೆ ಮತ್ತು ರಿಪೇರಿ ಮಾಡುವ ಕಾರ್ಮಿಕರು, ಕೇಬಲ್ ಕಾರ್ಮಿಕರು, ಕಲ್ಯಾಣ ಮಂಟಪ/ ಸಬಾ ಭವನ/ ಟೆಂಟ್/ ಪೆಂಡಾಲ್‌ಗಳ ಕಾರ್ಮಿಕರು, ಗಾದಿ, ಹಾಸಿಗೆ ಮತ್ತು ದಿಂಬು ತಯಾರಿಕಾ ಕಾರ್ಮಿಕರು (ಪಿಂಜಾರರು/ ನದಾಫರು) ಇದ್ದರು.

ಹೊಸದಾಗಿ ಸೇರ್ಪಡೆ ಮಾಡಲಾಗಿರುವ 65 ಅಸಂಘಟಿತ ವರ್ಗಗಳು; ಹಿಂದುಳಿದ ವರ್ಗಗಳ ಪ್ರವರ್ಗ-1,2ಎ, 3ಎ, ಮತ್ತು 3ಬಿ ಗೆ ಸೇರಿದ ಪಾರಂಪರಿಕ ವೃತ್ತಿಯಲ್ಲಿ ತೊಡಗಿರುವ ಕಾರ್ಮಿಕರು; ಬಡಗಿ/ಮರದ ಕೆತ್ತನೆ ಕೆಲಸ, ಉಣ್ಣೆ ಮತ್ತು ಕಂಬಳಿ ನೇಯ್ಗೆ ಹಾಗೂ ಕಂಬಳಿ ತಯಾರಕೆ, ಅಡಿಕೆ ಹಾಳೆಯಿಂದ ತಟ್ಟೆತಯಾರಿಕೆ, ಸಿಲ್ಕ್ ರೀಲಿಂಗ್ ಮತ್ತು ಸಿಲ್ಕ್ ಟ್ವಿಸ್ಟಿಂಗ್ ಕೆಲಸ, ಪೊರಕೆ ಕಡ್ಡಿ ತಯಾರಿಕೆ, ಸುಣ್ಣ ಸುಡುವುದು, ವಾಲ ಊದುವುದು, ದನಗಾಹಿ ವೃತ್ತಿ, ಹೈನುಗಾರಿಕೆ (ಗೌಳಿ ವೃತ್ತಿ), ಬಳೆ ವ್ಯಾಪಾರ /ಮೇಣದ ಬತ್ತಿ ತಯಾರಿಕೆ, ಕಂಚು ಕೆಲಸ, ನಾರಿನಿಂದ ವಿವಿಧ ಉತ್ಪನ್ನ ತಯಾರಿಕೆ, ಬೆತ್ತದ ಕೆಲಸ (ರಟ್ಟನ್)ಆಟಿಕೆ/ ಗೊಂಬೆ ತಯಾರಿಕೆ ಮತ್ತು ಕೆತ್ತನೆ ಕೆಲಸ, ಚರ್ಮದ ವಸ್ತುಗಳ ತಯಾರಿಕೆ, ಅಗರಬತ್ತಿ ತಯಾರಿಕೆ, ಕಾಯರ್ ಫೈಬರ್ ತಯಾರಿಕೆ, ಸ್ಮಶಾನ ಕಾರ್ಮಿಕರು, ವಿಗ್ರಹ / ಕಲ್ಲು ಕೆತ್ತನೆ ಕೆಲಸ, ಮೀನುಗಾರಿಕೆ, ನಾಟಿ ಔಚಧಿ ತಯಾರಿಕೆ, ಬಣ್ಣ ಶೃಂಗಾರ (ಬ್ಯೂಟಿ ಪಾರ್ಲರ್)ಮಾಡುವ ವೃತ್ತಿ, ಶೀಟ್ ಮೆಟಲ್ ವೃತ್ತಿ, ಬೈಸಿಕಲ್ ರಿಪೇರಿ, ಬಣ್ಣಗಾರಿಕೆ, ಮುದ್ರಣಗಾರಿಕೆ ಮತ್ತು ಹಚ್ಚೆ ಹಾಕುವುದು, ಮ್ಯಾಟ್ ತಯಾರಿಕೆ, ಗಾಡಿ/ ರಥ ತಯಾರಿಕೆ, ಗ್ಲಾಸ್ ಬೀಡ್ಸ್ ತಯಾರಿಕೆ, ಮೆಟಲ್ ಕ್ರಾಫ್ಟ್, ಟಿನ್ ವಸ್ತುಗಳ ತಯಾರಿಕೆ, ಜೇನು ಸಾಕಾಣಿಕೆ, ನಿಟ್ಟಿಂಗ್ ಕೆಲಸ, ಗಾಣದ ಕೆಲಸ, ಮೆಷನರಿ ಕೆಲಸ, ಹೂವು ಕಟ್ಟುವ ವೃತ್ತಿ, ಹೊಸೈರಿ ವಸ್ತುಗಳ ತಯಾರಿಕೆ, ಪಾತ್ರೆಗಳಿಗೆ ಕಲಾಯಿ ಹಾಕುವುದು, ವಾದ್ಯವೃಂದ ವೃತ್ತಿ, ವೆಲ್ಡಿಂಗ್ ಕೆಲಸ, ಕುರಿ ಸಾಕಾಣಿಕೆ.

ಹಿಂದುಳಿದ ವರ್ಗಗಳ ಅಲೆಮಾರಿ ಹಾಗೂ ಅರೆಅಲೆಮಾರಿ ಪಂಗಡದ ಕುಲಕಸುಬಿನಲ್ಲಿ ತೊಡಗಿರುವ ಕಾರ್ಮಿಕರು ; ಧಾರ್ಮಿಕ ಭಿಕ್ಷುಕ ವೃತ್ತಿ, ಭವಿಷ್ಯ ನುಡಿಯುವುದು, ಲಾವಣಿ ಪದಗಳನ್ನು ಹಾಡುವುದು, ಹವಾಮಾನ ಪ್ರವಾಧಿಗಳು, ಹಳ್ಳಿಗಾಡಿನ ಸಾಹಸ ಕಲೆಗಳ ಪ್ರದರ್ಶನ, ಗುಂಡು ಎಸೆಯುವುದು, ಲಾಗ ಹಾಕುವುದು, ಎತ್ತಿನ ಬಂಡಿ ತಿರುಗಿಸುವುದು ಇತರೆ ಕಸರತ್ತುಗಳ ವೃತ್ತಿ, ದೇವಸ್ಥಾನಗಳಲ್ಲಿ ನರ್ತಿಸುವುದು, ಭಿಕ್ಷಾಟನೆ, ಅಂಭಾದೇವಿಯ ಆರಾಧಕರು, ಗೋಂಧಳಿ ನೃತ್ಯ ಮಾಡುವುದು, ಜ್ಯೋತಿಷ್ಯ ಗಿಣಿ ಶಾಸ್ತ್ರ, ಹಸ್ತ ಮುದ್ರಿಕೆ ಶಾಸ್ತ್ರ, ಬುಡಬುಡಕಿ ಭವಿಷ್ಯ, ಕಣಿ ಹೇಳುವುದು, ದೇವರ ಕಥೆಗಳು ಹಾಗೂ ಪುರಾಣದ ಕಥೆಗಳನ್ನು ಹೇಳುವ ಹಾಗೂ ಬೊಂಬೆ ಪ್ರದರ್ಶನ, ಮದುವೆ ಮತ್ತು ಹಬ್ಬದ ದಿನಗಳಂದು ಡೋಲು ಬಡಿದು ಹಾಡು ಹೇಳುವುದು, ಅರಿಶಿಣ, ಕುಂಕುಮ ಮಾರಾಟ, ಮಸಾಲೆ ದಿನಸಿ ಮಾರಾಟ, ದೊಂಬರಾಟ, ವಿದೂಷಕ, ಮೋಡಿಗಾರರು, ಕಣ್ಣು ಕಟ್ಟು ವಿದ್ಯೆ, ಗೊಂದಲು ಹಾಕುವುದು (ಪೂಜಾ ವಿಧಾನ), ಗ್ರಾಮ ಚರಿತ್ರೆಗಳ ಪಾರುಪತ್ತೆಗಾರರು, ತಂಬೂರು ಮತ್ತು ಹಾರ್ಮೋನಿಯಂ, ಸಹಾಯದಿಂದ ಪದಗಳನ್ನು ಕಟ್ಟಿ ಹಾಡುವುದು, ಬೊಂಬೆ, ಹೊದಿಕೆ, ಬಾಚಣಿಕೆ ತಯಾರಿಕೆ, ಹಚ್ಚೆ ಹಾಕುವುದು, ಎತ್ತನ್ನು ಹಿಡಿದುಕೊಂಡು ಊರಿಂದ ಊರಿಗೆ ಹೋಗಿ ಭಿಕ್ಷೆ ಬೇಡುವುದು, ಹಠಯೋಗ, ಧರ್ಮ ಪ್ರಚಾರ, ಕಾಲಭೈರವನ ಆರಾಧನೆ, ಕತ್ತಿ ತಯಾರಿಕೆ, ಔಷಧಿ ಮಾರಾಟಗಾರರು, ಭಿಕಾರಿ ವೈದ್ಯ ವೃತ್ತಿ ಗಾರುಡಿಗರು, ಬೀಸುವ ಕಲ್ಲು ಮತ್ತು ವೀಸಣಿಕೆ ಮಾರಾಟ, ಮರದ ಸೌಟುಗಳ ತಯಾರಿಕೆ, ಸೂಜಿ, ದಾರ, ಒಳಕಲ್ಲು ಮಾರಾಟ, ಡ್ರಾಮ್  ಬಾರಿಸುವುದು ಮತ್ತು ಕೊಳಲು ನುಡಿಸುವುದು, ಕಬ್ಬಿಣ, ತಾಮ್ರದ ತಂತಿಗಳನ್ನು ಉಪಯೋಗಿಸಿ ವಿಧವಿಧವಾದ ಬಳೆ ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸುವುದು, ತೊಗಲು ಬೊಂಬೆ ಆಡಿಸುವುದು, ಮರಗವನ ಆಡಿಸುವುದು, ಊರುರು ಅಲೆದು ಬಯಲಾಟಗಳ ಪ್ರದರ್ಶನ, ತಾಮ್ರ, ಬೆಳ್ಳಿ, ಕಲ್ಲು, ಹಿತ್ತಾಳೆಗಳಿಂದ ಆಭರಣಗಳನ್ನು ತಯಾರಿಸಿ ಮಾರಾಟ ಮಾಡುವುದು, ಅಲೆಮಾರಿ ಪಶುಪಾಲಕರು, ಕೋಳಿಮೊಟ್ಟೆ/ ಮೀನು ಮಾರಾಟ.

  • ದೊರಕುವ ಸೌಲಭ್ಯಗಳು:
    1. ಅಪಘಾತ ಪರಿಹಾರ ಸೌಲಭ್ಯ: -1) ಅಪಘಾತದಿಂದ ಮರಣ ಹೊಂದಿದಲ್ಲಿ ಅವರ ನಾಮನಿರ್ದೇಶಿತರಿಗೆ ರೂ. 1.00 ಲಕ್ಷ ಪರಿಹಾರ.2) ಅಪಘಾತದಿಂದ ಸಂಪೂರ್ಣ/ ಭಾಗಶಃ ದುರ್ಬಲತೆ ಹೊಂದಿದಲ್ಲಿ ರೂ. 1.00 ಲಕ್ಷಗಳವರೆಗೆಪರಿಹಾರ.3) ಆಸ್ಪತ್ರೆ ವೆಚ್ಚ ಮರುಪಾವತಿ ರೂ.50,000/- ಗಳ ವರೆಗೆ( ಅಪಘಾತ ಪ್ರಕರಣಗಳಲ್ಲಿ ಮಾತ್ರ).
    2. ಸಹಜ ಮರಣ ಪರಿಹಾರ ಮತ್ತು ಅಂತ್ಯಕ್ರಿಯೆ ವೆಚ್ಚ :-
    1) ನೋಂದಾಯಿತ ಫಲಾನುಭವಿಯು ವಯೋಸಹಜ/ ಖಾಯಿಲೆ/ಅಕಾಲಿಕ ಅಥವಾ ಇನ್ನಿತರೆ ಕಾರಣಗಳಿಂದ ಮರಣ ಹೊಂದಿದಲ್ಲಿ ಫಲಾನುಭವಿಯ ಕುಟುಂಬದವರಿಗೆ ಅಂತ್ಯಕ್ರಿಯೆ ವೆಚ್ಚಕ್ಕಾಗಿ ರೂ.10,000/- ಗಳ ಧನಸಹಾಯ.

ನೋಂದಣಿಗೆ ಅರ್ಹತೆ: ಈ ಯೋಜನೆಯು ಕರ್ನಾಟಕ ರಾಜ್ಯದ ನಿವಾಸಿಗಳಿಗೆ ಮಾತ್ರ ಅನ್ವಯ. 18 ರಿಂದ 60 ವಯೋಮಾನದವರು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇ.ಪಿ.ಎಫ್. ಹಾಗೂ ಇ.ಎಸ್.ಐ ಸೌಲಭ್ಯ ಹೊಂದಿರಬಾರದು.

ಅವಶ್ಯಕ ದಾಖಲೆಗಳು: ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಬಾವಚಿತ್ರ. ಆಧಾರ್ ಸಂಖ್ಯೆ, ಪಡಿತರ ಚೀಟಿ (ಲಭ್ಯವಿದ್ದಲ್ಲಿ), ಬ್ಯಾಂಕ್ ಪಾಸ್ ಪುಸ್ತಕ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾರ್ಮಿಕ ಸಂಪರ್ಕಿಸಿ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top