ಬೆಂಗಳೂರು: ರಾಜ್ಯ ಸರ್ಕಾರ ಮೀನು ಪ್ರಿಯರಿಗೆ ಸಿಹಿ ಸುದ್ದಿ ನೀಡಿದ್ದು,ಇನ್ಮುಂದೆ ಆನ್‍ಲೈನ್ ಮೂಲಕವೇ ಫ್ರೆಶ್ ಮೀನುಗಳು ಮನೆ ಬಾಗಿಲಿಗೆ ತರಿಸಿಕೊಂಡು ತಿನ್ನಬಹುದು. ಇಂತಹದೊಂದು ಅವಕಾಶವನ್ನು ಸರ್ಕಾರವೇ ಕಲ್ಪಿಸಿದೆ. ಈ ಬಗ್ಗೆ ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟಾ ಶ್ರೀನಿವಾಸಪೂಜಾರಿ ಮಾಹಿತಿ ನೀಡಿದ್ದು, ಶೀಘ್ರ ಮೀನಿನ ಆನ್ ಲೈನ್ ಆರ್ಡರ್ ಗೆ ಚಾಲನೆ ಸಿಗಲಿದೆ ಎಂದರು.
ಮೀನನ್ನು ಆನ್‍ಲೈನ್ ಮೂಲಕ ಮನೆಗೆ ಸರಬರಾಜು ಮಾಡುವ ಪ್ರಸ್ತಾವನೆ ಇಲಾಖೆಯಲ್ಲಿದ್ದು, ಅದನ್ನ ಶೀಘ್ರದಲ್ಲಿಯೇ ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ 137.20 ಕೋಟಿ ರೂ. ಯೋಜನಾ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮುಂದಿನ ಐದು ವರ್ಷಗಳಿಗೆ ರಾಜ್ಯದಲ್ಲಿ ಸುಮಾರು 4,115 ಕೋಟಿ ರೂ. ಕ್ರಿಯಾ ಯೋಜನೆ ಸಲ್ಲಿಸಲಾಗಿದೆ ಎಂದರು.
ಆನ್ ಲೈನ್ ನಲ್ಲಿ ಮೀನು ಮಾರಾಟಕ್ಕೆ ಆ್ಯಪ್ ಸಿದ್ಧಪಡಿಸಲಾಗುತ್ತಿದ್ದು, ನ.21ರಂದು ಮತ್ಸ್ಯ ಸಂಪದ ಯೋಜನೆ ಹಾಗೂ ಕಾರ್ಯಗಾರಕ್ಕೆ ಚಾಲನೆ ನೀಡಲಾಗುವುದು. ಗೂಗಲ್ ಫ್ಲೇ ಸ್ಟೋರ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ, ನಿಮ್ಮಿಷ್ಟದ ಮೀನುಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಗ್ರಾಹಕರಿಗೆ ಸಿಗಲಿದೆ ಎಂದು ತಿಳಿಸಿದರು.



