ಬೆಂಗಳೂರು: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಆದರ್ಶ ವಿದ್ಯಾಲಯ ಶಾಲೆಗೆ 2024-25ನೇ ಸಾಲಿನ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಫೆ.06 ಅರ್ಜಿ ಸಲ್ಲಿದಲು ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಯ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಪ್ರವೇಶ ಪರೀಕ್ಷೆಗೆ ಅರ್ಜಿಯನ್ನು ಅಂತರ ಜಾಲದಲ್ಲಿ (ಆನ್‍ಲೈನ್) WWW.schooleducation.kar.nic.in ಅಥವಾ WWW.vidyavahini.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ತುಂಬುವಾಗ ವಿದ್ಯಾರ್ಥಿಗಳು ತಮ್ಮ ಫೋಷಕರು ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮೊಬೈಲ್ ಮೂಲಕ ಮೆಸೇಜ್ ಹೋಗುತ್ತದೆ. ಆದ್ದರಿಂದ ಸೈಬರ್ ಸೆಂಟರ್ ಅವರ ಮೊಬೈಲ್ ನಂಬರ್ ಹಾಕಬಾರದು.
ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಪಾಲಕರು ತಮ್ಮ ಮಕ್ಕಳ ಶಾಲೆಯ ಎಸ್.ಟಿ.ಎಸ್ ನಲ್ಲಿ ದಾಖಲಾತಿ ಮಾಹಿತಿಯನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳಬೇಕು. ಎಸ್.ಎ.ಟಿ.ಎಸ್ ನಂಬರ್ ಎಂಟ್ರಿ ಮಾಡಿದ ತಕ್ಷಣ ಮಾಹಿತಿ ಅರ್ಜಿ ಫಾರ್ಮನಲ್ಲಿ ಅಪ್‍ಲೋಡ್ ಆಗುತ್ತದೆ. ತಪ್ಪು ಮಾಹಿತಿ ಸಲ್ಲಿಸಿದರೆ ದಾಖಲಾತಿ ಆಗುವುದಿಲ್ಲ. ಅದಕ್ಕೆ ಪಾಲಕರೇ ಹೊಣೆಗಾರರಾಗಿರುತ್ತಾರೆ.
ವಿದ್ಯಾರ್ಥಿಯ ಎಸ್.ಎ.ಟಿ.ಎಸ್. ನಂಬರ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್.ಡಿ. ಸಂಖ್ಯೆ, ಆಧಾರ್ ಕಾರ್ಡ್ , ಪಾಸ್ ಪೋರ್ಟ್ ಸೈಜ್ 1 ಫೋಟೋ, ವ್ಯಾಸಂಗ ದೃಢೀಕರಣ ಪತ್ರ , ವಾಸ ಸ್ಥಳ ದೃಢೀಕರಣ ಪತ್ರ, ವಿಶೇಷ ಮೀಸಲಾತಿ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ, ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಶಾಲೆಯ ಹೆಡ್ ಮಾಸ್ಟರ್ ಮೊಬೈಲ್ ಸಂಖ್ಯೆ, ವಾಸಸ್ಥಳ ಪ್ರಮಾಣ ಪತ್ರ ಅಗತ್ಯವಾಗಿರುತ್ತದೆ.



