ಬೆಂಗಳೂರು : 1ರಿಂದ 9ನೇ ತರಗತಿ ವರೆಗಿನ ಪರೀಕ್ಷೆ ಇಲ್ಲದೇ ಪಾಸ್ ಮಾಡವ ಕುರಿತು ಶೈಕ್ಷಣಿಕ ತಜ್ಞರೊಂದಿಗೆ ಇಂದು ನಡೆದ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಎರಡು ದಿನಲ್ಲಿ ಮತ್ತೊಂದು ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದರು.
ರಾಜ್ಯದ 1 ರಿಂದ 9ನೇ ತರಗತಿ ಪರೀಕ್ಷೆ ಕುರಿತಂತೆ ಇಂದು ಶಿಕ್ಷಣ ತಜ್ಞರು, ಶಾಲಾ ಮುಖ್ಯಸ್ಥರು, ಪೋಷಕರೊಂದಿಗೆ ಸಭೆ ನಡೆಸಿ ಸಭೆ ನಡೆಯಿತು. ರಾಜ್ಯದಲ್ಲಿ ಕೊರೋನಾ ಸೋಂಕಿನ 2ನೇ ಅಲೆಯ ಹೆಚ್ಚಾಗಿದೆ. ಈ ಸ್ಥಿತಿಯಲ್ಲಿ ಪರೀಕ್ಷೆ ನಡೆಸುವ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಹೀಗಾಗಿ ಪೋಷಕರು, ತಜ್ಞರ ಅಭಿಪ್ರಾಯ ಪಡೆಯಲಾಗಿದೆ ಎಂದರು.



