ವಿಜಯಪುರ: ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಮತ್ತೆ ಭೂಕಂಪದ ಅನುಭವ ಆಗಿದೆ. ಬೆ. 8-18 ರಿಂದ 8-20 ರಲ್ಲಿ ನಡುವೆ ಭೂಮಿ ಕಂಪಿಸಿದೆ.
ಕಳೆದ ಶನಿವಾರ ಮಧ್ಯ ರಾತ್ರಿ 11-47 ಹಾಗೂ 11-49 ರ ಮಧ್ಯಾವಧಿಯಲ್ಲಿ ಭೂಕಂಪನ ಸಂಭವಿಸಿದ್ದು, ಕಂಪನದ ತೀವ್ರತೆ 3.9 ಇತ್ತು ಎಂದು ಆಲಮಟ್ಟಿ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು. ಆದರೆ ಭೂಕಂಪ ಮಹಾರಾಷ್ಟ್ರದ ಕೊಲ್ಹಾಪುರ ಬಳಿ ಕೇಂದ್ರಿತವಾಗಿತ್ತು. ಇದರ ಭಾಗಶಃ ಪರಿಣಾಮ ವಿಜಯಪುರ ಜಿಲ್ಲೆಗೆ ಆಗಿದೆ.