ದೀಪಾವಳಿ ಹಬ್ಬಕ್ಕೆ ನಾಲ್ಕು ವಿಶೇಷ ರೈಲು

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
4 Min Read

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ಹೋಗಲು ರೈಲ್ವೆ ಇಲಾಖೆ ರಾಜ್ಯದ ವಿವಿಧ ಭಾಗಕ್ಕೆ ಬೆಂಗಳೂರಿನಿಂದ ನಾಲ್ಕು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದೆ.

ದೀಪಾವಳಿ ಹಬ್ಬದ ಹೆಚ್ಚುವರಿ ದಟ್ಟಣೆ ತೆರವುಗೊಳಿಸಲು ನೈಋತ್ಯ ರೈಲ್ವೆಯು ನಾಲ್ಕು ಮಾರ್ಗದಲ್ಲಿ ವಿಶೇಷ ರೈಲುಗಳನ್ನು ಬೇಡಿಕೆಯ ಮೇರೆಗೆ ಓಡಿಸಲು ನಿರ್ಧರಿಸಿದೆ. ಅಕ್ಟೋಬರ್ 21 ಮತ್ತು 22 ರಂದು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿರುವುದಾಗಿ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಶೇಷ ರೈಲಿನ ವಿವರ:1. ರೈಲು ಸಂಖ್ಯೆ 06271/06272 ಯಶವಂತಪುರ – ಎಸ್.ಎಸ್.ಎಸ್ ಹುಬ್ಬಳ್ಳಿ – ಯಶವಂತಪುರ ಸೂಪರ್‌ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ (ಒಂದು ಟ್ರಿಪ್): ರೈಲು ಸಂಖ್ಯೆ 06271 ಯಶವಂತಪುರ – ಎಸ್‌ಎಸ್‌ಎಸ್ ಹುಬ್ಬಳ್ಳಿ ಸೂಪರ್‌ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ಅಕ್ಟೋಬರ್ 21 ರಂದು ಯಶವಂತಪುರ ನಿಲ್ದಾಣದಿಂದ ಮಧ್ಯಾಹ್ನ 02:30 ಗಂಟೆಗೆ ಹೊರಟು ಅದೇ ದಿನ ರಾತ್ರಿ 09:50 ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ. ಈ ರೈಲು ತುಮಕೂರು (03:20/03:22 PM), ಅರಸೀಕೆರೆ (04:37/04:39 PM), ದಾವಣಗೆರೆ (06:38/06:40 PM), ರಾಣೆಬೆನ್ನೂರ (07:09/07:10 PM) ಮತ್ತು ಎಸ್.ಎಮ್.ಎಮ್ ಹಾವೇರಿ (07:25/07:27 PM) ನಿಲ್ದಾಣಗಳಲ್ಲಿ ಆಗಮಿಸಲಿದೆ.

ಹುಬ್ಬಳಿಯಿಂದ ರೈಲು ಸಂಖ್ಯೆ 06272 ಎಸ್‌.ಎಸ್‌.ಎಸ್ ಹುಬ್ಬಳ್ಳಿ – ಯಶವಂತಪುರ ಸೂಪರ್‌ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ಅಕ್ಟೋಬರ್ 22 ರಂದು ಎಸ್‌.ಎಸ್‌.ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಬೆಳಿಗಿನ ಜಾವ 01:00 ಗಂಟೆಗೆ ಹೊರಟು ಅದೇ ದಿನ ಬೆಳಿಗ್ಗೆ 08:50 ಕ್ಕೆ ಯಶವಂತಪುರ ನಿಲ್ದಾಣವನ್ನು ತಲುಪುತ್ತದೆ. ಈ ರೈಲು ಹಾವೇರಿ (02:18/02:20 AM), ರಾಣಿಬೆನ್ನೂರು (02:48/02:50 AM), ದಾವಣಗೆರೆ (03:28/03:30 AM), ಅರಸೀಕೆರೆ (05:35/05:40 AM) ಮತ್ತು ತುಮಕೂರು (07:00/07:02 AM) ನಿಲ್ದಾಣಗಳಲ್ಲಿ ಆಗಮಿಸುತ್ತದೆ.

2. ರೈಲು ಸಂಖ್ಯೆ 06505/06506 ಯಶವಂತಪುರ – ಬೆಳಗಾವಿ – ಯಶವಂತಪುರ ಸೂಪರ್‌ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್: ರೈಲು ಸಂಖ್ಯೆ 06505 ಯಶವಂತಪುರ – ಬೆಳಗಾವಿ ಸೂಪರ್‌ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ಅಕ್ಟೋಬರ್ 21 & 22 ರಂದು ಯಶವಂತಪುರ ನಿಲ್ದಾಣದಿಂದ ರಾತ್ರಿ 11:30 ಗಂಟೆಗೆ ಹೊರಟು ಮರು ದಿನ ಬೆಳಿಗ್ಗೆ 09:25 ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.

ಈ ರೈಲು ತುಮಕೂರು (12:15/12:17 AM), ಅರಸೀಕೆರೆ (01:27/01:32 AM), ಕಡೂರು (02:05/02:07 AM), ಚಿಕ್ಕಜಾಜೂರ (02:57/02:59 AM), ದಾವಣಗೆರೆ (03:35/03:37 AM), ರಾಣಿಬೆನ್ನೂರ (04:12/04:13 AM), ಎಸ್.ಎಮ್.ಎಮ್ ಹಾವೇರಿ (04:40/04:41 AM), ಎಸ್.ಎಸ್.ಎಸ್ ಹುಬ್ಬಳ್ಳಿ (06:15/06:25 AM), ಧಾರವಾಡ (06:50/06:52 AM), ಲೋಂಡಾ (08:07/08:08 AM) ಮತ್ತು ಖಾನಾಪುರ (08:32/08:33 AM) ನಿಲ್ದಾಣಗಳಲ್ಲಿಆಗಮಿಸಿ/ನಿರ್ಗಮಿಸುತ್ತದೆ.

ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06506 ಬೆಳಗಾವಿ – ಯಶವಂತಪುರ ಸೂಪರ್‌ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ಅಕ್ಟೋಬರ್ 22 ರಂದು ಬೆಳಗಾವಿ ನಿಲ್ದಾಣದಿಂದ ಬೆಳಿಗ್ಗೆ 11:10 ಗಂಟೆಗೆ ಹೊರಟು ಅದೇ ದಿನ ರಾತ್ರಿ 10:00 ಕ್ಕೆ ಯಶವಂತಪುರ ನಿಲ್ದಾಣವನ್ನು ತಲುಪುತ್ತದೆ. ಈ ರೈಲು ಖಾನಾಪುರ (11:35/11:36 AM), ಲೋಂಡಾ (12:04/12:05 PM), ಧಾರವಾಡ (01:24/01:26 PM), ಎಸ್.ಎಸ್.ಎಸ್ ಹುಬ್ಬಳ್ಳಿ (03:10/03:20 PM), ಎಸ್.ಎಮ್.ಎಮ್ ಹಾವೇರಿ (04:29/04:30 PM), ರಾಣಿಬೆನ್ನೂರ (04:59/05:00 PM), ದಾವಣಗೆರೆ (05:43/05:45 PM), ಚಿಕ್ಕಜಾಜೂರ್ (06:15/06:17 PM), ಕಡೂರು (07:13/07:15 PM), ಅರಸೀಕೆರೆ (07:45/07:50 PM) ಮತ್ತು ತುಮಕೂರು (09:10/09:12 PM) ನಿಲ್ದಾಣಗಳಲ್ಲಿ ಆಗಮಿಸಿ/ನಿರ್ಗಮಿಸುತ್ತದೆ.

3.ರೈಲು ಸಂಖ್ಯೆ 06507 ಯಶವಂತಪುರ – ಶಿವಮೊಗ್ಗ ಟೌನ್ ವಿಶೇಷ ಎಕ್ಸ್‌ಪ್ರೆಸ್ (ಏಕೈಕ ಸೇವೆ): ರೈಲು ಸಂಖ್ಯೆ 06507 ಯಶವಂತಪುರ – ಶಿವಮೊಗ್ಗ ಟೌನ್ ವಿಶೇಷ ಎಕ್ಸ್‌ಪ್ರೆಸ್ ಅಕ್ಟೋಬರ್ 22 ರಂದು ಯಶವಂತಪುರ ನಿಲ್ದಾಣದಿಂದ ಬೆಳಿಗ್ಗೆ 10:30 ಗಂಟೆಗೆ ಹೊರಟು ಅದೇ ದಿನ ಮಧ್ಯಾಹ್ನ 03:30 ಕ್ಕೆ ಶಿವಮೊಗ್ಗ ಟೌನ್ ನಿಲ್ದಾಣ ತಲುಪಲಿದೆ. ಈ ರೈಲು ತುಮಕೂರು (11:14/11:15 AM), ಅರಸೀಕೆರೆ (12:33/12:34 PM), ಬೀರೂರು (01:23/01:25 PM) ಮತ್ತು ಭದ್ರಾವತಿ (02:18/02:20 PM) ನಿಲ್ದಾಣಗಳಲ್ಲಿಆಗಮಿಸಿ/ನಿರ್ಗಮಿಸುತ್ತದೆ.

4. ರೈಲು ಸಂಖ್ಯೆ 07305 ಬೆಳಗಾವಿ – ಯಶವಂತಪುರ ಸೂಪರ್‌ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ (ಏಕೈಕ ಸೇವೆ): ರೈಲು ಸಂಖ್ಯೆ 07305 ಬೆಳಗಾವಿ – ಯಶವಂತಪುರ ಸೂಪರ್‌ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ಅಕ್ಟೋಬರ್ 26 ರಂದು ಬೆಳಗಾವಿ ನಿಲ್ದಾಣದಿಂದ ರಾತ್ರಿ 10:00 ಗಂಟೆಗೆ ಹೊರಟು ಮರು ದಿನ ಬೆಳಿಗ್ಗೆ 08:50 ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.

ಈ ರೈಲು ಖಾನಾಪುರ (10:23/10:24 PM) ಲೋಂಡಾ (10:50/10:52 PM), ಧಾರವಾಡ (12:15/12:17 AM), ಎಸ್ ಎಸ್ ಎಸ್ ಹುಬ್ಬಳ್ಳಿ (12:45/12:55 AM), ಎಸ್.ಎಮ್.ಎಮ್ ಹಾವೇರಿ (02:18/02:20 AM), ರಾಣಿಬೆನ್ನೂರ (02:48/02:50 AM), ಹರಿಹರ (03:10/03:12 AM), ದಾವಣಗೆರೆ (03:28/03:30 AM), ಚಿಕ್ಕಜಾಜೂರ (04:08/04:10 AM), ಬೀರೂರು (04:53/04:55 AM), ಅರಸೀಕೆರೆ (05:35/05:40 AM), ತಿಪಟೂರು (06:00/06:02 AM) ಮತ್ತು ತುಮಕೂರು (07:00/07:02 AM) ನಿಲ್ದಾಣಗಳಲ್ಲಿಆಗಮಿಸುತ್ತದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *