Connect with us

Dvgsuddi Kannada | online news portal | Kannada news online

ಮುಂದಿನ 8 ತಿಂಗಳಲ್ಲಿ ಎಲ್ಲಾ ಅರ್ಜಿ ವಿಲೇವಾರಿ ಮಾಡಿ ಅರ್ಹರಿಗೆ ಭೂಮಿ ಮಂಜೂರು; ಕಂದಾಯ ಸಚಿವ

n56481160217024723206389c4c1a337f7b56d1a4801ee6a9a5403603ac8709f17e36f528282c5a1f337b50

ಪ್ರಮುಖ ಸುದ್ದಿ

ಮುಂದಿನ 8 ತಿಂಗಳಲ್ಲಿ ಎಲ್ಲಾ ಅರ್ಜಿ ವಿಲೇವಾರಿ ಮಾಡಿ ಅರ್ಹರಿಗೆ ಭೂಮಿ ಮಂಜೂರು; ಕಂದಾಯ ಸಚಿವ

ಬೆಂಗಳೂರು: ಮುಂದಿನ 8 ತಿಂಗಳಲ್ಲಿ ಎಲ್ಲಾ ಬಗರ್ ಹುಕುಂ ಅರ್ಜಿಗಳನ್ನು ವಿಲೇವಾರಿ ಮಾಡಿ ಅರ್ಹರಿಗೆ ಭೂಮಿ ಮಂಜೂರು ಮಾಡುವಂತೆ ಆಯಾ ತಹಸಿಲ್ದಾರ್ ಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಬಗರ್ ಹುಕುಂ ನಮೂನೆ 57ರ ಅಡಿಯಲ್ಲಿ ಒಟ್ಟಾರೆ 9.80 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಅನರ್ಹ ಅರ್ಜಿಗಳು ಹೆಚ್ಚಾಗಿವೆ. ಈ ಅರ್ಜಿಗಳ ವಿಲೇವಾರಿಗೆ 160 ಬಗರ್ ಹುಕುಂ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಪ್ರತಿ ತಿಂಗಳು ಕನಿಷ್ಠ ಮಟ್ಟದ ಅರ್ಜಿ ವಿಲೇವಾರಿಯಾಗಬೇಕು. ಮುಂದಿನ 8 ತಿಂಗಳಲ್ಲಿ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ ಅರ್ಹರಿಗೆ ಭೂಮಿ ಮಂಜೂರು ಮಾಡಲು ತಿಳಿಸಲಾಗಿದೆ ಎಂದು ತಿಳಿಸಿದರು.

ಸಂಪೂರ್ಣ ಮತ್ತು ಕನಿಷ್ಠ ದಾಖಲೆ ಹೊಂದಿದ ರೈತರಿಗೆ ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ದರ್ಖಾಸ್ತು ಪೋಡಿ ಮಾಡಿಕೊಡಲಾಗುವುದು. ಈಗಾಗಲೇ ದರ್ಖಾಸ್ತು ಪೋಡಿ ಬಾಕಿ ಕೆಲಸ ಅಭಿಯಾನ ಆರಂಭಿಸಲಾಗಿದೆ. ರಾಜ್ಯದಲ್ಲಿ 22 ಲಕ್ಷ ಖಾಸಗಿ ಸರ್ವೇ ನಂಬರ್ ಗಳಲ್ಲಿ ಒಬ್ಬರಿಗಿಂತ ಹೆಚ್ಚು ಮಾಲೀಕರಿದ್ದು, ಖಾಸಗಿ ಸರ್ವೇ ನಂಬರ್ ಪೋಡಿಗೂ ಅಭಿಯಾನ ನಡೆಸಲಾಗುತ್ತದೆ.

ಪ್ರತ್ಯೇಕ ಪಹಣಿ ಮಾಡಿಕೊಡಬೇಕಾಗಿರುವುದು ಕಂದಾಯ ಇಲಾಖೆಯ ಮೂಲ ಕರ್ತವ್ಯವಾಗಿದ್ದು, ಇದುವರೆಗೆ ಆ ಕೆಲಸವಾಗದ ಕಾರಣ ಪೋಡಿ ಮಾಡಿಕೊಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

  • astrology today astrology today

    ಪ್ರಮುಖ ಸುದ್ದಿ

    ಭಾನುವಾರದ ರಾಶಿ ಭವಿಷ್ಯ 01 ಜೂನ್ 2025

    By

    ಈ ರಾಶಿಯವರಿಗೆ ವಿದೇಶ ಯೋಗ, ಈ ರಾಶಿಯವರಿಗೆ ಮದುವೆ ಯೋಗ, ರಾಶಿಯ ದಂಪತಿಗಳಿಗೆ ಸಂತಾನ ಭಾಗ್ಯ, ಭಾನುವಾರದ ರಾಶಿ ಭವಿಷ್ಯ 01...

  • astrology today astrology today

    ಪ್ರಮುಖ ಸುದ್ದಿ

    ಶನಿವಾರದ ರಾಶಿ ಭವಿಷ್ಯ 31 ಮೇ 2025

    By

    ಈ ರಾಶಿಯ ಕಲಾವಿದರಿಗೆ ಶುಭ ಸಂದೇಶ, ಈ ರಾಶಿಯವರಿಗೆ ಎಲ್ಲಾ ಇದ್ದು ಏನೂ ಕೈಗೂಡುತ್ತಿಲ್ಲ, ಶನಿವಾರದ ರಾಶಿ ಭವಿಷ್ಯ 31 ಮೇ...

  • astrology today astrology today

    ಪ್ರಮುಖ ಸುದ್ದಿ

    ಶುಕ್ರವಾರದ ರಾಶಿ ಭವಿಷ್ಯ 30 ಮೇ 2025

    By

    ಈ ರಾಶಿಯವರ ವ್ಯಾಪಾರಕ್ಕೆ ಗ್ರಾಹಕರ ಕೊರತೆ, ಈ ರಾಶಿಯವರ ಮದುವೆಗೆ ಬಂದ ಸಂಬಂಧ ಫಿಕ್ಸ್ ಆಗುತ್ತಿಲ್ಲ , ಶುಕ್ರವಾರದ ರಾಶಿ ಭವಿಷ್ಯ...

  • images 11 images 11

    ಪ್ರಮುಖ ಸುದ್ದಿ

    ಗಜಕೇಸರಿ ಯೋಗ ಮಾಹಿತಿ

    By

    ಸೋಮಶೇಖರ್B.Sc ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರಪ್ರವೀಣರು. Mob.93534 88403 ವ್ಯಕ್ತಿಯ ಜನ್ಮ ಕುಂಡಲಿಯನ್ನು ನೋಡಿ ಯೋಗಗಳನ್ನು ನೋಡಬಹುದು. ಅದರಲ್ಲಿ ಒಂದು...

  • astrology today astrology today

    ಪ್ರಮುಖ ಸುದ್ದಿ

    ಗುರುವಾರದ ರಾಶಿ ಭವಿಷ್ಯ 29 ಮೇ 2025

    By

    ಈ ರಾಶಿಯವರಿಗೆ ಬಂಪರ್, ಈ ರಾಶಿಯವರಿಗೆ ಮದುವೆ ಯೋಗ, ಈ ರಾಶಿ ದಂಪತಿಗಳಿಗೆ ಸಂತಾನ ಭಾಗ್ಯ, ಗುರುವಾರದ ರಾಶಿ ಭವಿಷ್ಯ 29...

To Top