ಬೆಂಗಳೂರು: ಸರ್ಕಾರ ವಿದ್ಯಾರ್ಥಿಗಳಿಗೆ ಶಾಕ್ ನೀಡಿದೆ. ಕಾಲೇಜು ಶಿಕ್ಷಣ ಇಲಾಖೆಯು ಸರಕಾರಿ ಮತ್ತು ಅನುದಾನಿತ ಕಾಲೇಜುಗಳ ಶುಲ್ಕವನ್ನು ಶೇ.5 ಹೆಚ್ಚಳ ಮಾಡಿ ಆದೇಶ ನೀಡಿದೆ.
2025-26ನೇ ಶೈಕ್ಷಣಿಕ ಸಾಲಿನಿಂದ ಈ ದರ ಅನ್ವಯ ಆಗಲಿದೆ. ಸರಕಾರಿ ಪದವಿ, ಕಾನೂನು, ಚಿತ್ರಕಲಾ ಕಾಲೇಜುಗಳ ಪದವಿ ಕೋರ್ಸ್‌ಗಳಿಗೆ ಶುಲ್ಕ ಹೆಚ್ಚಳವಾಗಿದೆ. ಬಿ.ಎಸ್ಸಿ, ಬಿಸಿಎ ಮತ್ತು ಬಿ.ಕಾಂ.ನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಕಂಪ್ಯೂ ಟರ್ ಅಪ್ಲಿಕೇಷನ್ ಹೊಂದಿರುವ ಕೋರ್ಸ್‌ಗಳಿಗೆ 1 ಸಾವಿರ ರೂ.ಗಳಿಂದ 6 ಸಾವಿರ ರೂ.ಗಳ ವರೆಗೆ ಶುಲ್ಕ ನಿಗದಿ ಪಡಿಸಲಾಗಿದ್ದು, ಇದರ ಜೊತೆಗೆ ವಿವಿಗಳು ಪ್ರತ್ಯೇಕ ಶುಲ್ಕ ಪಡೆಯಲು ಅವಕಾಶ ನೀಡಲಾಗಿದೆ.
ಅರ್ಜಿ ಶುಲ್ಕ, ಪ್ರವೇಶ ಶುಲ್ಕ, ಬೋಧನಾ ಶುಲ್ಕ ಹೀಗೆ 22 ರೀತಿಯ ಶುಲ್ಕವನ್ನು ವಿದ್ಯಾರ್ಥಿಗಳು ಪಾವತಿಸಬೇಕಾಗಿದೆ. ಈಗಾಗಲೇ ವೃತ್ತಿಪರ ಕೋರ್ಸ್‌ಗಳ ಶುಲ್ಕವನ್ನು ಸರಕಾರ ಏರಿಸಿದೆ. ಜತೆಗೆ ಖಾಸಗಿ ಶಾಲಾ ಮತ್ತು ಕಾಲೇಜುಗಳೂ ತಮ್ಮ ಶುಲ್ಕವನ್ನು ಶೇ. 8ರಿಂದ ಶೇ. 20ರ ವರೆಗೆ ಹೆಚ್ಚಳಕ್ಕೆ ಮುಂದಾಗಿವೆ.