ಬೆಂಗಳೂರು: ಸ್ಯಾಂಡಲ್ವುಡ್ ಬಹು ನಿರೀಕ್ಷಿತ ಸಿನಿಮಾ, ಧ್ರುವ ಸರ್ಜಾ ನಟನೆಯ ಪೊಗರು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ನಾಳೆ (ಫೆ.14) ದಾವಣಗೆರೆಯಲ್ಲಿ ಪೊಗರು ಸಿನಿಮಾದ ಆಡಿಯೋ ಲಾಂಚ್ ಸಮಾರಂಭ ನಡೆಯಲಿದೆ.
ಪೊಗರು ಆಡಿಯೋ ಲಾಂಚ್ ಸಮಾರಂಭಕ್ಕೆ ಚಿತ್ರತಂಡ ವಿಪಕ್ಷ ನಾಯಕ ಸಿದ್ದರಾಮಯ್ಯಗೂ ಆಹ್ವಾನ ನೀಡಿದ್ದಾರೆ. ನಟ ಧ್ರುವ ಸರ್ಜಾ ಹಾಗೂ ಚಿತ್ರದ ನಿರ್ದೇಶಕ ನಂದ ಕಿಶೋರ್ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಸಮಾರಂಭಕ್ಕೆ ಆಹ್ವಾನಿಸಿದ್ದರು.

ನಾಳೆ ಸಂಜೆ 06 ಗಂಟೆಗೆ ನಗರದ ಹೈಸ್ಕೂಲ್ ಮೈದಾನದಲ್ಲಿ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಚಿತ್ರತಂಡವು ಹಲವು ರಾಜಕಾರಣಿಗಳು ಮತ್ತು ಕಲಾವಿದರನ್ನು ಸಮಾರಂಭಕ್ಕೆ ಆಹ್ವಾನಿಸಿದ್ದು, ಪ್ರೇಮಿಗಳ ದಿನದಂದೇ ಬೆಣ್ಣೆನಗರಿಯಲ್ಲಿ ಆಡಿಯೋ ರಿಲೀಸ್ ಕಾರ್ಯಕ್ರಮ ಆಯೋಜಿಸಿದೆ. ಸಿನಿಮಾ ಫೆ. 19 ರಂದು ರಿಲೀಸ್ ಆಗಲಿದೆ.



