ದಾವಣಗೆರೆ: ಮಾ.27 ರಂದು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಮೆಗಾ ಲೋಕ್ ಅದಾಲತ್ ಆಯೋಜಿಸಿರುತ್ತಾರೆ. ಈ ಅದಾಲತ್‍ನಲ್ಲಿ ಹೆಚ್ಚು ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಲು ಉದ್ದೇಶಿಸಲಾಗಿದೆ.
ದಾವಣಗೆರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಕಾನೂನು ಸೇವಾ ಸಮಿತಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ತಾಲ್ಲೂಕು ಮಟ್ಟದಲ್ಲಿ ಮೆಗಾ ಲೋಕ್ ಅದಲಾತ್‍ನ್ನು ನಡೆಸುವ ವ್ಯವಸ್ಥೆ ಮಾಡಿ ಕೊಂಡಿರುತ್ತಾರೆ. ಕಾರಣ ಈ ಅದಾಲತ್‍ನಲ್ಲಿ ನ್ಯಾಯಲಯಗಳಲ್ಲಿ ಪೆಂಡಿಂಗ್ ಇರುವ ಹಾಗೂ ಇನ್ನೂ ದಾಖಲು ಮಾಡದೇ ಇರುವ ರಾಜೀಯಾಗುವಂತಹ ಎಲ್ಲಾ ಪ್ರಕರಣಗಳಲ್ಲಿ ಉಭಯ ಪಕ್ಷಗಾರರು ಹಾಜರಾಗಿ ತಮ್ಮ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು.
ಅದಾಲತ್‍ನಲ್ಲಿ ಎಂ.ವಿ.ಸಿ. ಪಾಲುವಿಭಾಗ, ಹಣಪಾವತಿ ದಾವೆಗಳ, ಹೆಚ್.ಆರ್.ಸಿ ಪ್ರಕರಣಗಳ ಹಾಗೂ ಇತರೆ ಸಿವಿಲ್ ದಾವೆಗಳು ಹಾಗೂ ಚೆಕ್ ಬೌನ್ಸ್ ಪ್ರಕರಣಗಳು, ಜೀವನಾಂಶದ ಅರ್ಜಿ ಪ್ರಕರಣಗಳು, ಕೌಟುಂಬಿಕ (ವಿಚ್ಚೇದನವನ್ನು ಹೊರತು ಪಡಿಸಿ) ಕಲಹಗಳ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಗೀತಾ.ಕೆ.ಬಿ ಮತ್ತು ಸದಸ್ಯ ಕಾರ್ಯದರ್ಶಿಗಳಾದ ಪ್ರವೀಣ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



