Connect with us

Dvgsuddi Kannada | online news portal | Kannada news online

ಜ.19 ರಂದು ದಾವಣಗೆರೆಗೆ ಬರಲಿದೆ ಕುರುಬ ಸಮಾಜದ ಎಸ್ ಟಿ ಮೀಸಲಾತಿ ಹಕ್ಕೊತ್ತಾಯದ ಪಾದಯಾತ್ರೆ

ದಾವಣಗೆರೆ

ಜ.19 ರಂದು ದಾವಣಗೆರೆಗೆ ಬರಲಿದೆ ಕುರುಬ ಸಮಾಜದ ಎಸ್ ಟಿ ಮೀಸಲಾತಿ ಹಕ್ಕೊತ್ತಾಯದ ಪಾದಯಾತ್ರೆ

ದಾವಣಗೆರೆ: ಕುರುಬ ಸಮಾಜಕ್ಕೆ ಎಸ್‍ಟಿ ಮೀಸಲಾತಿಗೆ ಕೇಂದ್ರ ಮತ್ತು ರಾಜ್ಯಕ್ಕೆ ಹಕ್ಕೊತ್ತಾಯಕ್ಕೆ ಆಗ್ರಹಿಸಿ ಹಮ್ಮಿಕೊಂಡಿರುವ ಪಾದಯಾತ್ರೆಯು ಜ.19 ರಂದು ಮಧ್ಯಾಹ್ನ 3 ಗಂಟೆಗೆ ತಾಲ್ಲೂಕಿನ ದೊಡ್ಡಬಾತಿಯಿಂದ ಪ್ರಾರಂಭಗೊಳ್ಳಲಿದೆ ಎಂದು ಸಮಾಜದ ಮುಖಂಡ, ಡೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಕ್ಕೆ ಸಂಜೆ 4 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ವರೆಗೂ ಡೊಳ್ಳುಗಳು, ಗೊರವರ ಕುಣಿತದ ಮೂಲಕ ಕುರುಬ ಸಮಾಜದ ಬುಡಕಟ್ಟು ಸಂಸ್ಕೃತಿಯನ್ನು ಪ್ರದರ್ಶನ ನಡೆಯಲಿದ್ದು, ಈ ವೇಳೆ ಪಾದಯಾತ್ರೆಯ ನೇತೃತ್ವ ವಹಿಸಿರುವ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗಳನ್ನು ದಾವಣಗೆರೆಗೆ ಸ್ವಾಗತಿಸಲಾಗುತ್ತದೆ ಎಂದು ತಿಳಿಸಿದರು.

ರಾತ್ರಿ ಬೀರಲಿಂಗೇಶ್ವರ ದೇವಾಲಯದಲ್ಲಿ ವಾಸ್ತವ್ಯ ಹೂಡಲಾಗುತ್ತದೆ.ನಂತರ ಜ.20 ರ ಬೆಳಿಗ್ಗೆ6 ಗಂಟೆಗೆ ಬೀರಲಿಂಗೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಪ್ರಾರಂಭವಾಗಲಿದ್ದು, ಅಂದು ಬೆಳಿಗ್ಗೆ 9 ಗಂಟೆಗೆ ಹೊನ್ನೂರು ಗೊಲ್ಲರಹಟ್ಟಿಯಲ್ಲಿ ಜಾಗೃತಿ ಸಭೆ ನಡೆಸಲಾಗುತ್ತದೆ. ನಂತರ ಕೊಗ್ಗನೂರಿನಲ್ಲಿ ವಾಸ್ತವ್ಯ ಹೂಡಲಾಗುತ್ತದೆ ಎಂದು ತಿಳಿಸಿದರು.

ಪಾಯಾತ್ರೆಯೂ ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಮೂಲಕ ಬೆಂಗಳೂರು ತಲುಪಿ ಸಮಾಜಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಎಸ್ಟಿ ಮೀಸಲಾತಿಗೆ ಒತ್ತಾಯಿಸಲಾಗುವುದು. ಈ ಪಾದಯಾತ್ರೆಯಲ್ಲಿ ದಾವಣಗೆರೆಯಿಂದ ಐದು ಸಾವಿರಕ್ಕೂ ಅಧಿಕ ಜನರ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದರು.

ಈ ಸಂದರ್ಭದಲ್ಲಿ ಮಾಜದ ಮುಖಂಡರಾದ ರಾಜು ಮೌರ್ಯ, ಶಿವಣ್ಣ ಮಾಸ್ಟರ್, ಸಿದ್ದಲಿಂಗಪ್ಪ, ಹಾಲೇಕಲ್ಲು ವೀರಣ್ಣ, ಘನರಾಜ್, ಚಂದ್ರು ದೀಟೂರು ಭಾಗವಹಿಸಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top