ದಾವಣಗೆರೆ: 8 ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿ ತವರು ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡು ದುರಂತ ಅಂತ್ಯಕಂಡಿರುವ ದುರ್ಘಟನೆ ನಗರದ ಬಂಬೂಬಜಾರ್ನಲ್ಲಿ ನಡೆದಿದೆ.
ಬೀಬಿ ಅಜೀರಾ ಆತ್ಮಹತ್ಯೆಗೀಡಾದ ಗೃಹಿಣಿ. ಇಮ್ರಾನ್ ಜತೆ 8 ತಿಂಗಳು ಹಿಂದೆ ಈಕೆಯ ಮದುವೆ ಆಗಿತ್ತು. ಆ ವೇಳೆ 1 ಲಕ್ಷ ನಗದು, 3 ತೊಲ ಚಿನ್ನಾಭರಣ ಕೊಟ್ಟು ಬೀಬಿ ಅಜೀರಾ ಪಾಲರು ಮದುವೆ ಮಾಡಿಕೊಟ್ಟಿದ್ದರು. ತವರಿನಿಂದ ಹಣ ತೆಗೆದುಕೊಂಡು ಬಾ, ಬೈಕ್ ಕೊಡಿಸು ಎಂದೆಲ್ಲ ಬೀಬಿ ಅಜೀರಾಳನ್ನು ಗಂಡ ಮತ್ತು ಆತನ ಮನೆಯವರು ಪೀಡಿಸುತ್ತಿದ್ದರು. ಗಂಡನ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ತವರು ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ಮಗಳ ಸಾವಿಗೆ ನ್ಯಾಯ ಬೇಕು ಎಂದು ಮೃತಳ ಪಾಲಕರು ಒತ್ತಾಯಿಸಿದ್ದಾರೆ. ಜಿಲ್ಲಾಸ್ಪತ್ರೆ ಶವಾಗಾರಕ್ಕೆ ತಹಸೀಲ್ದಾರ್ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಾವಣಗೆರೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.