ದಾವಣಗೆರೆ: ಕುಂದುವಾಡ ಕೆರೆ ವಾಯುವಿಹಾರಿಗಳ ಬಳಗದಿಂದ ಇಂದು ದಾವಣಗೆರೆಯಿಂದ ಹರಿಹರದ ಹರಿಹರೇಶ್ವರ ದೇವಸ್ಥಾನದವರೆಗೆ ಕಾಲ್ನೆಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ಹರಿಹರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಪ್ರಾಣಾಯಾಮ ಆಯೋಜಿಸಲಾಗಿತ್ತು. ಇದೇ ವೇಳೆ ದಾವಣಗೆರೆ ಲೆಕ್ಕಪರಿಶೋಧಕರ ಸಂಘದಿಂದ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಿದ್ದರು. ಸುಮಾರು 300 ಹೆಚ್ಚು ಕ್ರೀಡಾಪಟುಗಳು, ಕುಸ್ತಿಪಟುಗಳು, ಹಿರಿಯ ನಾಗರಿಕರು, ದಾವಣಗೆರೆಯ ಯೋಗಪಟುಗಳು, ಸೈಕಲ್ ವಿಹಾರಿಗಳು ಹಾಗೂ 100 ಮಹಿಳೆಯರು ಪುಟಾಣಿ ಮಕ್ಕಳು ನಗರದ ವಿವಿಧ ಕಡೆಯ ವಾಯುವಿಹಾರಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು. ಇನ್ನು ಜಾಥದಲ್ಲಿ ಭಾಗಿಯಾದವರಿಗೆ ಡ್ರೈ ಫ್ರೂಟ್ಸ್ ನೀರಿನ ವ್ಯವಸ್ಥೆ ಹಾಗೂ ಹೆಸರು ಕಾಳು ಕಡ್ಲೆಕಾಳು, ಡ್ರೈಫ್ರೂಟ್ಸ್, ಚಾಕ್ಲೆಟ್ ಗಳನ್ನು ರಾಮಕೃಷ್ಣಾಶ್ರಮದಿಂದ ನೀಡಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಗಡಿ ಗುಡಾಳ್ ಮಂಜುನಾಥ್ ಗೌಡ ಸಹ ಭಾಗವಹಿಸಿದ್ದರು.
ಕುಂದುವಾಡ ಕೆರೆ ವಾಯು ವಿಹಾರಿಗಳ ಬಳಗದಿಂದ ಹರಿಹರೇಶ್ವರ ದೇವಸ್ಥಾನದ ವರೆಗೆ ಜಾಥಾ
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ...
Editor: munikondajji, MA journalism, contact number:7483892205, e-mail: dvgsuddi@gmail.com
Leave a Comment