ತುಮಕೂರು: ಹರೆಯದ ಹುಡುಗರಿಗೇ ಹೆಣ್ಣು ಸಿಗದು ಕಷ್ಟ ಎನ್ನುವ ಕಾಲದಲ್ಲಿ 45 ವರ್ಷದ ವ್ಯಕ್ತಿ ಜೊತೆ 25 ವರ್ಷ ಯುವತಿ ಮದುವೇ ಆಗಿರೋ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇದು ಯಾವುದೇ ಬೇರೆ ರಾಜ್ಯದಲ್ಲಿ ನಡೆದ ಘಟನೆಯಲ್ಲ. ಮಧ್ಯ ಕರ್ನಾಟಕದ ತುಮಕೂರಿನಲ್ಲಿ ನಡೆದ ವಿವಾಹ. ಋಣಾನುಬಂಧ ಯಾರಿಗೆ ಎಲ್ಲಿ ಇರುತ್ತೆ ಅಂತಾ ಹೇಳವುದಕ್ಕೆ ಆಗಲ್ಲ. 45 ವರ್ಷದ ವ್ಯಕ್ತಿ 25 ವರ್ಷಯ ಯುವತಿಯೊಂದಿಗೆ ವಿವಾಹವಾಗುತ್ತಿದ್ದಂತೆ ಪೋಟೋ ಸೋಷಿಯಲ್ ಭಾರೀ ವೈರಲ್ ಆಗಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಬಳಿಯಲ್ಲಿನ ಅಕ್ಕಿಮರಿಪಾಳ್ಯದ ಶಂಕರಣ್ಣ ಜೊತೆಗೆ ಮೇಘನಾ ದೇವಾಲಯದಲ್ಲಿ ಮದುವೆಯಾಗಿದ್ಧಾರೆ. ಕಳೆದ ಎರಡು ವರ್ಷಗಳ ಹಿಂದೆ ಮೇಘನಾ ಮದುವೆಯಾಗಿದ್ದರು. ಆದ್ರೇ ಅವರ ಪತಿ ಕಾಣೆಯಾಗಿದ್ದು, ಹೀಗಾಗಿ ಶಂಕರಣ್ಣ ಅವರನ್ನು ಮೇಘನಾ ಒಪ್ಪಿಗೆ ಮೇರೆಗೆ ಮದುವೆಯಾಗಿದ್ಧಾರೆ.
ತಮ್ಮ ಊರಿನ ಸಮೀಪದಲ್ಲಿನ ದೇವಾಲಯದಲ್ಲಿ ಇಬ್ಬರು ಮದುವೆಯಾಗಿದ್ದಾರೆ. ಶಂಕರಣ್ಣ, ಮೇಘನಾ ಜೊತೆಗೆ ಸಪ್ತಪತಿ ತುಳಿದಿದ್ದಾರೆ. ಇದರಿಂದ ಮನನೊಂದ ಯುವಕರು ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಮಾಡುತ್ತಿದ್ದಾರೆ.