ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ಭೀತಿಯ ನಡುವೆಯೂ ಜನವರಿ 1ರಿಂದ ಶಾಲಾ-ಕಾಲೇಜು ಆರಂಭಗೊಳ್ಳಲಿದೆ. ಹೀಗಾಗಿ ರಾಜ್ಯ ಸರ್ಕಾರ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಪಠ್ಯವನ್ನು ಕಡಿತಗೊಳಿಸಿದೆ. ಬೋಧನಾ ಅವಧಿ 120 ಗಂಟೆಗೆ ಇಳಿಕೆ ಮಾಡಿದೆ. ಜೊತೆಗೆ ಸೆಪ್ಟೆಂಬರ್ 1ರಿಂದ ಮಾರ್ಚ್ 31ರವರೆಗೆ ಅನ್ವಯವಾಗುವಂತೆ ಶೈಕ್ಷಣಿಕ ಚಟುವಟಿಕೆಗಳನ್ನು ನಿಗದಿ ಪಡಿಸಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಾಹಿತಿ ಲಭ್ಯವಾಗಿದ್ದು, ಜನವರಿ 1ರಿಂದ ಶಾಲಾ-ಕಾಲೇಜು ಆರಂಭಗೊಳ್ಳಲಿದೆ. ಹೀಗೆ ಆರಂಭಗೊಳ್ಳಲಿರುವಂತ ಶಾಲಾ-ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗದಂತೆ, ಶಿಕ್ಷಣ ಇಲಾಖೆಯಿಂದ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಪಠ್ಯವನ್ನು ಕಡಿತಗೊಳಿಸಿದೆ. ಅಲ್ಲದೇ ಬೋಧನಾ ಅವಧಿ 120 ಗಂಟೆಗೆ ಇಳಿಕೆ ಮಾಡಿದೆ. ಜೊತೆಗೆ ಸೆಪ್ಟೆಂಬರ್ 1ರಿಂದ ಮಾರ್ಚ್ 31ರವರೆಗೆ ಅನ್ವಯವಾಗುವಂತೆ ಶೈಕ್ಷಣಿಕ ಚಟುವಟಿಕೆಗಳನ್ನು ನಿಗದಿ ಪಡಿಸಿದೆ ಎನ್ನಲಾಗಿದೆ.
ಪಠ್ಯಪುಸ್ತಕ ಸಂಘದಿಂದ 1ರಿಂದ 10ನೇ ತರಗತಿ ಪಠ್ಯವನ್ನು ಕಡಿತ ಮಾಡಲಾಗಿದ್ದು, ಪ್ರತಿ ವಿಷಯಗಳಲ್ಲೂ ಕೆಲ ಪಠ್ಯವನ್ನು ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗದಂತೆ ಕಡಿತ ಮಾಡಿದೆ. ಪ್ರಮುಖ ವಿಷಯಗಳನ್ನು ಬೋಧಿಸಲು ಮಾತ್ರವೇ ಪಠ್ಯಕ್ರಮ ನಿಗದಿ ಪಡಿಸಿದೆ. ಈ ಮೂಲಕ ಜನವರಿ 1ರಿಂದ ಆರಂಭಗೊಳ್ಳಲಿರುವಂತ ಶಾಲಾ-ಕಾಲೇಜು ಶೈಕ್ಷಣಿಕ ಚಟುವಟಿಕೆಗೆ ಯಾವುದೇ ಸಮಸ್ಯೆಯಾಗದಂತೆ ಶಿಕ್ಷಣ ಇಲಾಖೆ ಪಠ್ಯಕ್ರಮದಲ್ಲಿ ಕಡಿತಗೊಳಿಸಲಾಗಿದೆ ಎನ್ನಲಾಗುತ್ತಿದೆ.



