ಬೆಂಗಳೂರು: ರಾಜ್ಯದಲ್ಲಿಂದು ಒಂದೇ ದಿನ 39,047 ಪ್ರಕರಣಗಳು ಪತ್ತೆಯಾಗಿದೆ. ಇದು ಈವರೆಗಿನ ದಾಖಲೆಯ ಪ್ರಕರಣಗಳಾಗಿವೆ.
ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 14,39,822ಕ್ಕೆ ಏರಿಕೆಯಾಗಿದೆ. ಅದರಲ್ಲಿ 10,95,883 ಮಂದಿ ಬಿಡುಗಡೆಯಾಗಿದ್ದು, 3,28,884 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ಈವರೆಗೆ ಮೃತರ ಸಂಖ್ಯೆ 15,036ಕ್ಕೆ ಏರಿಕೆಯಾಗಿದೆ. ಬೆಂಗಳೂರು ಒಂದೇ ಜಿಲ್ಲೆಯಲ್ಲಿ ಈವರೆಗೆ 7,10,347 ಪ್ರಕರಣ ಪತ್ತೆಯಾಗಿದ್ದು, ಅದರಲ್ಲಿ 2,24,152 ಸಕ್ರಿಯ ಪ್ರಕರಣಗಳು ಬಾಕಿಯಿವೆ.
ಇಂದು ಬೆಂಗಳೂರಿನಲ್ಲಿ 22,596, ಮೈಸೂರಿನಲ್ಲಿ 1759, ಕೋಲಾರದಲ್ಲಿ 1194, ತುಮಕೂರಿನಲ್ಲಿ 1174, ಬಳ್ಳಾರಿಯಲ್ಲಿ 1106, ಹಾಸನದಲ್ಲಿ 1001 ಪ್ರಕರಣಗಳು ಕಾಣಿಸಿಕೊಂಡಿವೆ. ಉಳಿದಂತೆ ಹಾವೇರಿ ಹೊರೆತುಪಡಿಸಿ ಬೇರೆಲ್ಲ ಜಿಲ್ಲೆಗಳಲ್ಲಿ ಮೂರಂಕಿಯ ಸಂಖ್ಯೆ ವರದಿಯಾಗಿದೆ. ಹಾವೇರಿಯಲ್ಲಿ 36 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 137 ಸೋಂಕಿತರು ಸೇರಿ ರಾಜ್ಯದಲ್ಲಿ ಒಟ್ಟು 229 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.



