ದಾವಣಗೆರೆ: ಪ್ರಯಾಣಿಕರ ಕೊರತೆ ಹಿನ್ನೆಲೆ ನೈರುತ್ಯ ರೈಲ್ವೆ ವಿಭಾಗವು ವಿವಿಧ ವಿಶೇಷ ರೈಲುಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ರದ್ದುಪಡಿಸಿದೆ. ಯಶವಂತಪುರ-ಬೀದರ್ (02671) ಮೇ. 04 ರಿಂದ, ಬೀದರ್-ಯಶವಂತಪುರ (02672) ರೈಲು ಮೇ. 05 ರಿಂದ ರದ್ದುಪಡಿಸಲಾಗಿದೆ.
ಅದೇ ರೀತಿ ಯಶವಂತಪುರ- ಲಾತೂರ್ (06583) ಮೇ. 05 ರಿಂದ, ಲಾತೂರ್-ಯಶವಂತಪುರ (06584) ಮೇ. 06 ರಿಂದ. ಬೆಂಗಳೂರು-ನಾಗರಕೊಯಿಲ್(07235) ಮೇ. 05 ರಿಂದ, ನಾಗರಕೊಯಿಲ್-ಬೆಂಗಳೂರು (07236) ಮೇ. 06 ರಿಂದ. ಬೆಂಗಳೂರು- ಶಿವಮೊಗ್ಗ (02089), ಶಿವಮೊಗ್ಗ-ಬೆಂಗಳೂರು (02090) ಮೇ. 04 ರಂದ. ಯಶವಂತಪುರ- ಕಣ್ಣೂರ್ (06537) ಮೇ. 04 ರಿಂದ, ಕಣ್ಣೂರ್-ಯಶವಂತಪುರ್ (06538) ಮೇ. 05 ರಿಂದ. ಬೆಂಗಳೂರು-ಧಾರವಾಡ (07225) ಮೇ. 04 ರಿಂದ, ಧಾರವಾಡ-ಬೆಂಗಳೂರು (07226) ಮೇ. 05 ರಿಂದ ಮುಂದಿನ ಆದೇಶದವರೆಗೆ ರದ್ದುಪಡಿಸಲಾಗಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



