ತೆಂಗು, ಅಡಿಕೆ, ನಿಂಬೆ, ಕರಿಬೇವು ಬೆಳೆಯೋ ಪ್ಲ್ಯಾನ್ ಇದ್ಯಾ..? ಇಲ್ಲಿದೆ ತೋಟಗಾರಿಕೆ ಇಲಾಖೆ ಅಭಿವೃದ್ಧಿ ಪಡಿಸಿದ ಸಸಿಗಳು..!

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಕಸಿ/ಸಸಿಗಳನ್ನು ಸಸ್ಯಾಭಿವೃದ್ದಿ ಮಾಡಲಾಗಿದ್ದು, ಸರ್ಕಾರಿ ಮಾರಾಟ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಆಸಕ್ತ ರೈತರು ತೋಟಗಾರಿಕೆ ಕ್ಷೇತ್ರಗಳಲ್ಲಿ ಲಭ್ಯವಿರುವ ಕಸಿ/ಸಸಿಗಳ ಸದುಪಯೋಗ ಪಡೆದುಕೊಳ್ಳಬಹುದು.

ಬೇಲಿಮಲ್ಲೂರು ತೋಟಗಾರಿಕೆ ಕ್ಷೇತ್ರ ಹೊನ್ನಾಳಿ ಮೊ.ಸಂ:9972496486 ಇಲ್ಲಿ ಅಡಿಕೆ-1200, ನಿಂಬೆ-200 ಸಸಿಗಳು ಲಭ್ಯವಿದೆ. ಆವರಗೊಳ್ಳ ತೋಟಗಾರಿಕೆ ಕ್ಷೇತ್ರ ದಾವಣಗೆರೆ ಮೊ.ಸಂ:9844966636 ಇಲ್ಲಿ ತೆಂಗು(ಜವಾರಿ)-4310, ಅಲಂಕಾರಿಕ ಸಸಿಗಳು-1402 ಲಭ್ಯವಿದೆ. ಬುಳ್ಳಾಪುರ ತೋಟಗಾರಿಕೆ ಕ್ಷೇತ್ರ ಹರಿಹರ ಮೊ.ಸಂ: 9008900370 ಇಲ್ಲಿ ತೆಂಗು(ಜವಾರಿ)-3955 ಲಭ್ಯವಿದೆ. ವ್ಯಾಸಗೊಂಡನಹಳ್ಳಿ ತೋಟಗಾರಿಕೆ ಕ್ಷೇತ್ರ ಜಗಳೂರು ಮೊ.ಸಂ: 9663670572 ಇಲ್ಲಿ ತೆಂಗು(ಜವಾರಿ)-3872 ಲಭ್ಯವಿದೆ. ನರ್ಸರಿ ಕಚೇರಿ ದಾವಣಗೆರೆ ಮೊ.ಸಂ: 9964065115 ಇಲ್ಲಿ ಅಡಿಕೆ-5000, ಕರಿಬೇವು-1000, ಅಲಂಕರಿಕಾ ಸಸಿಗಳು-15000 ಲಭ್ಯವಿರುತ್ತದೆ. ಇವುಗಳ ಮಾರಾಟ ದರ ತೆಂಗು(ಜವಾರಿ) ರೂ.70, ಅಡಿಕೆ-ರೂ.20, ನಿಂಬೆ-ರೂ.11, ಕರಿಬೇವು-ರೂ.10 ಮತ್ತು ಅಲಂಕಾರಿಕ ಸಸಿಗಳು-ರೂ.15 ರಿಂದ 60 ಇರುತ್ತದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *