ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ಬಜೆಟ್ ಮಂಡನೆ ಮಾಡಿದ್ದು, ಈ ಬಾರಿಯ ಬಜೆಟ್ ನಲ್ಲಿ ಮುಸ್ಲಿಮರಿಗೆ ಬಂಪರ್ ಕೊಡುಗೆಗಳನ್ನು ನೀಡಿದ್ದಾರೆ. ಇದಕ್ಕೆ ವಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಮುಸ್ಲಿಮರಿಗೆ ಬಂಪರ್, ಹಿಂದೂಗಳಿಗೆ ಚಿಪ್ಪು. ಇದೊಂದು ಹಲಾಲ್ ಬಜೆಟ್ ಎಂದು ಕಿಡಿ ಕಾರಿದ್ದಾರೆ.
ಬಜೆಟ್ ನಲ್ಲಿ ಮುಸ್ಲಿಂ ಸಮುದಾಯಕ್ಕೆ ಈ ಮಟ್ಟಿಗೆ ವಿಶೇಷ ಅನುದಾನ ಘೋಷಣೆ ಮಾಡಿರುವುದಕ್ಕೆ ಇದು ಹಲಾಲ್ ಬಜೆಟ್ ಎಂದು ಬಿಜೆಪಿ ಟೀಕೆ ಮಾಡಿದೆ. ಈ ಬಜೆಟ್ ನ್ನು ನೋಡಿದರೇ ಕಾಂಗ್ರೆಸ್ ಮುಸ್ಲಿಮ್ ಓಲೈಕೆ ಎಷ್ಟಿದೆ ಎಂಬುದು ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
- ಮುಸ್ಲಿಂ ಸಮುದಾಯಕ್ಕೆ ಬಜೆಟ್ ನಲ್ಲಿ ಕೊಟ್ಟ ಅನುದಾನ ಎಷ್ಟು.?
- ಸರಳ ವಿವಾಹಕ್ಕೆ 50,000 ರೂ. ಪ್ರೋತ್ಸಾಹ ಧನ
- ಮದರಸಾ ಶಿಕ್ಷಣ ಸಂಸ್ಥೆಗಳ ಮೇಲ್ದರ್ಜೆಗೇರಿಸಲು 400 ಕೋಟಿ ರೂ
- ಸರ್ಕಾರದ 2 ಕೋಟಿ ವರೆಗಿನ ಕಾಮಗಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ
- 100 ಉರ್ದು ಶಾಲೆಗಳಿಗೆ ಹೈಟೆಕ್ ಸ್ಪರ್ಶ
ಉಳ್ಳಾಲದಲ್ಲಿ ಅಲ್ಪಸಂಖ್ಯಾತ ಮಹಿಳಾ ವಸತಿ ಕಾಲೇಜು - ವಕ್ಫ್ ಖಬರಸ್ತಾನ್ ನಿರ್ವಹಣೆಗೆ 150 ಕೋಟಿ ರೂ.
- ಕೈಗಾರಿಕಾ ಪ್ರದೇಶ ಭೂಮಿ ಹಂಚಿಕೆಯಲ್ಲೂ ಮುಸ್ಲಿಮರಿಗೆ ಶೇ.20 ರಷ್ಟು ಮೀಸಲಾತಿ
- ಅಲ್ಪಸಂಖ್ಯಾತರು ಇರುವ ಪ್ರದೇಶದಲ್ಲಿ ಹೊಸ ಐಟಿಐ ಕಾಲೇಜು ಸ್ಥಾಪನೆ
- ಬೆಂಗಳೂರಿನಲ್ಲಿ ಹೆಚ್ಚುವರಿ ಹಜ್ ಭವನ ಸ್ಥಾಪನೆ