ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದ ಪಿಎಂ ಯೋಜನೆಯಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಡುಪಿ ಮತ್ತು ದಾವಣಗೆರೆ ಜಿಲ್ಲಾ ಆಸ್ಪತ್ರೆಗಳಲ್ಲಿ 50 ಹಾಸಿಗೆಗಳ ತೀವ್ರ ನಿಗಾ ಆರೈಕೆ ಘಟಕಗಳ ನಿರ್ಮಾಣ ಹಾಗೂ ಉಡುಪಿ, ದಾವಣಗೆರೆ ಮತ್ತು ವಿಜಯಪುರ ಜಿಲ್ಲಾ ಆಸ್ಪತ್ರೆಗಳ ತೀವ್ರ ನಿಗಾ ಆರೈಕೆ ಘಟಕ್ಕೆ ಅಗತ್ಯವಿರುವ ಉಪಕರಣಗಳನ್ನು ಖರೀದಿಸಲು ಒಟ್ಟು ಅಂದಾಜು ಮೊತ್ತ 39.37 ಕೋಟಿಗೆ ರಾಜ್ಯ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ವಿಧಾನಸೌಧದಲ್ಲಿ ಇಂದು ( ನ.14) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.ಡಿಸಿಎಂ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಚಲುವರಾಯಸ್ವಾಮಿ, ಜಮೀರ್ ಅಹ್ಮದ್, ಪರಮೇಶ್ವರ್, ಬೋಸರಾಜು ಸೇರಿದಂತೆ ಹಲವರು ಭಾಗಿಯಾಗಿದ್ದರು.ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳಿಗೆ ಕಾನೂನು ಸಚಿವ ಹೆಚ್ಕೆ ಪಾಟೀಲ್ ಮಾಹಿತಿ ನೀಡಿದರು.
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಇತರೆ ನಿರ್ಧಾರಗಳು
- ನಾಮ ನಿರ್ದೇಶನ ಮಾಡಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಿಎಂ ಸಿದ್ದರಾಮಯ್ಯಗೆ ಕ್ಯಾಬಿನೆಟ್ ಅಧಿಕಾರ
- 2024-25, 2025-26 ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಕಪ್ ಅಂಡ್ ಕಪ್ ಮಾದರಿಯಲ್ಲಿ ಅನುಷ್ಠಾನ
- ಈಗಾಗಲೇ ಹೊರಡಿಸಿರುವ ಆದೇಶಕ್ಕೆ ಹಾಗೂ ಯೋಜನೆಯನ್ನು ಜಾರಿಗೊಳಿಸಲು ಕ್ಲಸ್ಟರ್‌ವಾರು ವಿಮಾ ಸಂಸ್ಥೆಗಳಿಗೆ ಕಾರ್ಯಹಂಚಿಕೆ ಮಾಡಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ
- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಬೆಂಗಳೂರಿನ ಹೆಬ್ಬಾಳದಲ್ಲಿ “ಸಾವಯವ ಮತ್ತು ಸಿರಿಧಾನ್ಯ ಹಬ್’ನ್ನು 20 ಕೋಟಿ ರೂ. ಮೊತ್ತದಲ್ಲೆ (ಕೇಂದ್ರ – ರೂ. 12.00 ಕೋಟಿಗಳು, ರಾಜ್ಯ – ರೂ. 8.00 ಕೋಟಿಗಳು)
- ಅಕ್ರಮ ಗಣಿಗಾರಿಕೆ, ಹತ್ತು ಕಂಪನಿಗಳ ವಿರುದ್ಧ ಲೋಕಾಯುಕ್ತ ಎಸ್ಐಟಿ ತನಿಖೆಗೆ ಸಂಪುಟ ತೀರ್ಮಾನ
- ಅಕ್ರಮ ಗಣಿಗಾರಿಕೆ ಕುರಿತಾಗಿ ಹತ್ತು ಕಂಪನಿಗಳಿಗೆ ಸಿ ಪ್ರವರ್ಗ ಗಣಿ ಗುತ್ತಿಗೆ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಲೋಕಾಯುಕ್ತ ಎಸ್ ಐ ಟಿ ಗೆ ವಹಿಸಲು ಸಂಪುಟ ನಿರ್ಧಾರ
- ಮೈಸೂರು ಮ್ಯಾಂಗನೀಸ್ ಕಂಪನಿ, ಎಂ.ದಶರಥ ರಾಮರೆಡ್ಡಿ ಕಂಪನಿ, ಅಲ್ಲಂ ವೀರಭದ್ರಪ್ಪ ಗಣಿ ಕಂಪನಿ, ಕರ್ನಾಟಕ ಲಿಂಪೋ ಗಣಿ ಕಂಪನಿ, ಅಂಜನಾ ಮಿನರಲ್ಸ್, ರಝಯ್ಯಾ ಖಾನಂ ಗಣಿ, ಮಿಲನಾ ಮಿನರಲ್ಸ್, ಎಂ.ಶ್ರೀನಿವಾಸುಲು ಕಂಪನಿ, ಜಿ.ರಾಜಶೇಖರ್ ಕಂಪನಿ, ಚನ್ನಕೇಶವ ರೆಡ್ಡಿ ಲಕ್ಷ್ಮೀ ನರಸಿಂಹ ಮೈನಿಂಗ್ ಕಂಪನಿ ವಿರುದ್ಧ ತನಿಖೆ
- 50 ಹಾಸಿಗೆಗಳ ತೀವ್ರ ನಿಗಾ ಆರೈಕೆ ಘಟಕಗಳ ನಿರ್ಮಾಣ
- ರಾಮನಗರ ಜಿಲ್ಲೆ, ಚನ್ನಪಟ್ಟಣ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆಯ ಆವರಣದಲ್ಲಿ ಹೈ-ಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಾಣ ಹಂತ-2 ರ ಕಾಮಗಾರಿಯನ್ನು 125 ಕೋಟಿ
- ರಾಷ್ಟ್ರೀಯ ಆರೋಗ್ಯ ಅಭಿಯಾನದ ಭೀಮ್ ಯೋಜನೆಯಡಿ ರಾಜ್ಯದ 07 ವೈದ್ಯಕೀಯ ಕಾಲೇಜುಗಳಲ್ಲಿ (ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಹುಬ್ಬಳ್ಳಿ, ಹಾಸನ, ಬಳ್ಳಾರಿ) 50 ಹಾಸಿಗೆಗಳ ಸಾಮರ್ಥ್ಯದ ಒಟ್ಟು Block 07 Critical Care ನಿರ್ಮಾಣದ ರೂ. 148.20 ಕೋಟಿ
- 55 ಕೈದಿಗಳ ಬಿಡುಗಡೆಗೆ ಒಪ್ಪಿಗೆ
- ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಅಡಿ ಅಂಗನವಾಡಿಗಳಿಗೆ 3000 ಘಟಕ ವೆಚ್ಚದಂತೆ ಶಾಲಾ ಪೂರ್ವ ಶಿಕ್ಷಣ ಕಿಟ್ ಖರೀದಿಸಲು 20 ಕೋಟಿ ರೂ. ಮೊತ್ತ ಮತ್ತು ಡಾ. ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ರೂ. 13.94 ಕೋಟಿ