ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಸಿಡಿ ಯುವತಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಹೆಣ್ಣು ಮಗಳು ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದೀರಿ. ನಿಮ್ಮ ಹೊಲಸು ರಾಜಕಾರಣದಲ್ಲಿ ಹುಣ್ಣು ಮಕ್ಕಳನ್ನು ಬಲಿ ಕೊಡಬೇಡಿ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ.
ಡಿ.ಕೆ. ಶಿವಕುಮಾರ್ ತಮ್ಮ ರಾಜಕೀಯ ಹೊಲಸಿಗೆ ಒಬ್ಬ ಎಸ್ ಟಿ ಹೆಣ್ಣುಮಗಳನ್ನು ಬಳಸಿಕೊಂಡು ರಾಜಕಾಣ ಮಾಡುತ್ತಿದ್ದೀರಿ. ಈ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಭಾಗಿಯಾದ ಎಲ್ಲಾ ದಾಖಲಾತಿಗಳು ನಮ್ಮ ಬಳಿ ಇವೆ. ಎಲ್ಲಾ ದಾಖಲೆಗಳನ್ನು ಎಸ್ ಐಟಿಗೆ ಸಲ್ಲಿಸಿದ್ದೇವೆ ಎಂದು ಯುವತಿ ತಂದೆ ಹೇಳಿದ್ದಾರೆ.
ನನ್ನ ಅಕ್ಕನಿಗೆ ದೊಡ್ಡು ಕೊಟ್ಟು ಹೇಳಿಕೆ ನೀಡಿಸಿದ್ದಾರೆ. ಹಣ ಕೊಟ್ಟು ಗೋವಾಕ್ಕೆ ಕಳುಹಿಸಿದ್ದಾರೆ. ಈ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ನೇರ ಪಾತ್ರ ಇದೆ. ನನ್ನ ಅಕ್ಕನನ್ನು ಬಳಸಿಕೊಂಡು ಆಟ ಆಡುತ್ತಿದ್ಧಾರೆ. ನಮ್ಮ ಅಕ್ಕನನ್ನು ವಾಪಸ್ ಕಳುಹಿಸಿ ಎಂದು ಯುವತಿ ಸಹೋದರ ಮನವಿ ಮಾಡಿಕೊಂಡಿದ್ದಾನೆ.



