ಬಸವ ಕಲ್ಯಾಣ: ಪಾಪ ಆ ಯುವತಿ ಯಾರದ್ದೋ ಕುತಂತ್ರಕ್ಕೆ ಒಳಗಾಗಿದ್ದಾಳೆ. ನಾನು ಆ ಯುವತಿಗೆ ಮನವಿ ಮಾಡೊದೊಂದೇ, ನೀವು ಯಾರದೋ ಬಲವಂತಕ್ಕೆ ಒಳಗಾಗಿ ಗುಪ್ತವಾಗಿ ವಿಡಿಯೋ ಮಾಡೋದನ್ನ ಬಿಟ್ಟು ಹೊರ ಬನ್ನಿ. ನಿಮಗೆ ಸರ್ಕಾರದ ಮೇಲೆ ನಂಬಿಕೆ ಇಲ್ಲದಿದ್ರೆ ವಿಪಕ್ಷ ನಾಯಕ ಇಲ್ಲವೇ…? ಪ್ರಧಾನಿ ಮಂತ್ರಿಗಳಿಗೆ ಮನವಿ ಮಾಡಿ, ರಕ್ಷಣೆ ತೆಗೆದುಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇನ್ನು 10 ಸಿಡಿ ಬಂದ್ರೂ ಹೆದರಲ್ಲ; ತನಿಖೆ ನಂತರ ಪ್ರಕರಣದ ಮಹಾ ನಾಯಕ ಯಾರು ಅಂತಾ ಗೊತ್ತಾಗಲಿದೆ; ರಮೇಶ್ ಜಾರಕಿಹೊಳಿ
ಬಸವ ಕಲ್ಯಾಣದಲ್ಲಿ ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ, ಯುವತಿ ಯಾರದ್ದೋ ಕುತಂತ್ರಕ್ಕೆ ಒಳಗಾಗಿದ್ದಾಳೆ. ಯಾರದೋ ಒತ್ತಡಕ್ಕೆ ಓಳಗಾಗಿ ಎಲ್ಲೋ ಕುಳಿತು ಮಾತನಾಡುವುದು ಬೇಡ. ನಿಮ್ಮ ತಂದೆ-ತಾಯಿಗೆ ರಕ್ಷಣೆ ಸಿಗ್ಬೇಕು, ಹೀಗಾಗಿ ಹೊರ ಬನ್ನಿ ಎಂದರು. ನಾನು ತಪ್ಪೇ ಮಾಡಿಲ್ಲ; ನಮ್ಮ ತಂದೆ-ತಾಯಿ ಸ್ವ ಇಚ್ಛೆಯಿಂದ ದೂರು ನೀಡಿಲ್ಲ; ಎಸ್ ಐಟಿ ಯಾರ ಪರ ..? ಸಿಡಿ ಲೇಡಿ ಎರಡನೇ ವಿಡಿಯೋದಲ್ಲಿ ಪ್ರಶ್ನೆ



