ಬೆಂಗಳೂರು; ಸಿಎಂ ಸಿದ್ದರಾಮಯ್ಯ ಇಂದು ( ಮಾ.7) 2025-26 ನೇ ಸಾಲಿನ ಬಜೆಟ್ (ಆಯವ್ಯಯ) ಹಾಗೂ ತಮ್ಮ 16ನೇ ಬಜೆಟ್ ಮಂಡಿಸಿದರು. ಈ ಬಾರಿಯ ಬಜೆಟ್ನ ಗಾತ್ರ ಬರೋಬ್ಬರಿ 4 ಲಕ್ಷ ಕೋಟಿ ರೂ. ದಾಟಿದೆ. ಎಲ್ಲ ಇಲಾಖೆಗಳಿಗೂ ಬಜೆಟ್ ನಲ್ಲಿ ಹಣ ಹಂಚಿಕೆ ಮಾಡಲಾಗಿದೆ. ಹೊಸ ಯೋಜನೆ, ನೂತನ ಘೋಷಣೆಗಳೊಂದಿಗೆ ಸರ್ಕಾರ ಸಮಗ್ರ ರಾಜ್ಯದ ಅಭಿವೃದ್ಧಿಯ ಗುರಿ ಹೊಂದಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮುಸ್ಲಿಂ ಸಮುದಾಯಕ್ಕೆ ಬಂಪರ್ ಕೊಡುಗೆ; ಹಲಾಲ್ ಬಜೆಟ್ ಎಂದು ಬಿಜೆಪಿ ಕಿಡಿ
ಕಳೆದ ವರ್ಷ 3.71 ಲಕ್ಷ ಕೋಟಿ ರೂ. ಬಜೆಟ್ ಗಾತ್ರವಿತ್ತು. ಈ ಬಾರಿ 4 ಲಕ್ಷ ಕೋಟಿ ರೂ. ದಾಟಿದೆ. ಒಟ್ಟು 4,09,549 ಕೋಟಿ ರೂಪಾಯಿಯ ದಾಖಲೆಯ ಬಜೆಟ್ ಮಂಡಿಸಿದರು.
- ಇಲಾಖೆವಾರು ಅನುದಾನ
- ಶಿಕ್ಷಣ ಇಲಾಖೆ- 45,286 ಕೋಟಿ
- ಮಹಿಳಾ & ಮಕ್ಕಳ ಕಲ್ಯಾಣ- 34,955 ಕೋಟಿ
ಇಂಧನ ಇಲಾಖೆಗೆ 26,896 ಕೋಟಿ - ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ಗೆ $26,735 ಕೋಟಿ
- ನೀರಾವರಿ ಇಲಾಖೆಗೆ 22,181 ಕೋಟಿ
- ನಗರಾಭಿವೃದ್ಧಿ & ವಸತಿ ಇಲಾಖೆಗೆ 21,405 ಕೋಟಿ
- ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 20,625 ಕೋಟಿ
- ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಗೆ 17,473 ಕೋಟಿ
- ಕಂದಾಯ ಇಲಾಖೆಗೆ 17,201 ಕೋಟಿ
- ಸಮಾಜಕಲ್ಯಾಣ ಇಲಾಖೆಗೆ 16,955 ಕೋಟಿ
- ಲೋಕೋಪಯೋಗಿ ಇಲಾಖೆಗೆ 11,841 ಕೋಟಿ
- ಆಹಾರ & ನಾಗರಿಕ ಸರಬರಾಜು ಇಲಾಖೆಗೆ 8,275 ಕೋಟಿ
- ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 7145 ಕೋಟಿ
- ಪಶುಸಂಗೋಪನೆ & ಮೀನುಗಾರಿಕೆ ಇಲಾಖೆಗೆ 3,977 ಕೋಟಿ
- ಇತರೆ ಇಲಾಖೆಗಳಿಗೆ 1 ಲಕ್ಷ 49 ಸಾವಿರದ 857 ಕೋಟಿ