Connect with us

Dvgsuddi Kannada | online news portal | Kannada news online

3 ಲಕ್ಷ ಕೋಟಿ ಗಡಿ ದಾಟಿದ ಕರ್ನಾಟಕ ಬಜೆಟ್ ಗಾತ್ರ; ವಲಯವಾರು ಹಂಚಿಕೆ ಎಷ್ಟಿದೆ ..?

bommai buget 2023

ಪ್ರಮುಖ ಸುದ್ದಿ

3 ಲಕ್ಷ ಕೋಟಿ ಗಡಿ ದಾಟಿದ ಕರ್ನಾಟಕ ಬಜೆಟ್ ಗಾತ್ರ; ವಲಯವಾರು ಹಂಚಿಕೆ ಎಷ್ಟಿದೆ ..?

2023-24ನೇ ಸಾಲಿನ ಕರ್ನಾಟಕ ಬಜೆಟ್ ಒಟ್ಟು ಗಾತ್ರ 309182 ಕೋಟಿ ರೂಪಾಯಿ ಆಗಿದೆ. 2022-23ನೇ ಸಾಲಿನ ರಾಜ್ಯ ಬಜೆಟ್​ ಗಾತ್ರ 2 ಲಕ್ಷದ 66 ಸಾವಿರ ಕೋಟಿ ರೂಪಾಯಿ ಆಗಿತ್ತು.  ಈ ಬಾರಿಯ ಕರ್ನಾಟಕ ಬಜೆಟ್‌ 3 ಲಕ್ಷ ಕೋಟಿ ರೂಪಾಯಿಗಳ ಗಡಿದಾಟಿದೆ.

ಕರ್ನಾಟಕ ರಾಜ್ಯ ಮುಖ್ಯಮಂತ್ರಿ, ಹಣಕಾಸು ಸಚಿವ ಬಸವರಾಜ ಬೊಮ್ಮಾಯಿ 2023-24ನೇ ಹಣಕಾಸು ವರ್ಷದ ಬಜೆಟ್ ಮಂಡನೆಯನ್ನು ಇಂದು (ಫೆ.17) ಮಂಡಿಸಿದ್ದಾರೆ. ವಲಯವಾರು  ಹೊಸ ಘೋಷಣೆಗಳನ್ನು ಘೋಷಣೆ, ಕೆಲವು ಘೋಷಣೆಗಳನ್ನು ವಿಸ್ತರಣೆ ಮಾಡಿದ್ದಾರೆ. ರೈತರಿಗೆ, ಮೀನುಗಾರರಿಗೆ ಯೋಜನೆಗಳು, ಎಸ್​ಸಿ, ಎಸ್​​ಟಿ ಸಮುದಾಯಕ್ಕೆ ಯೋಜನೆ, ಬೀದಿಬದಿ ವ್ಯಾಪಾರಿಗಳಿಗೆ, ಆಶಾಕಾರ್ಯಕರ್ತೆಯರಿಗೆ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ಆಶಾಕಾರ್ಯಕರ್ತೆಯ ಗೌರವ ಧನ 1000 ರೂಪಾಯಿ ಏರಿಸುವ ಘೋಷಣೆಯನ್ನು ಹಣಕಾಸು ಇಲಾಖೆಯನ್ನು ಹೊಂದಿರುವ ಮುಖ್ಯಮಂತ್ರಿ ಮಾಡಿದ್ದಾರೆ.

ಎಲ್ಲ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಾಗೂ ಮಹಿಳಾ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಯೋಗ ತರಬೇತಿ ಆರಂಭ, ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕೆ ಮಕ್ಕಳ ಬಸ್​ ಯೋಜನೆ ಆರಂಭದ ಘೋಷಣೆಯನ್ನು ಕೂಡಾ ಮುಖ್ಯಮಂತ್ರಿ ಮಾಡಿದ್ದಾರೆ. ರಾಜ್ಯದ ಎಲ್ಲಾ ಪ್ರೌಢ ಶಾಲಾ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ದೃಷ್ಟಿಯಿಂದ ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ ಆರಂಭಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

  • ವಲಯವಾರು ಹಂಚಿಕೆ
  •  ಶಿಕ್ಷಣ – 37,960 ಕೋಟಿ ರೂಪಾಯಿ
  •  ಜಲಸಂಪನ್ಮೂಲ – 22,854 ಕೋಟಿ ರೂಪಾಯಿ
  •  ಗ್ರಾಮೀಣಾಭಿವೃದ್ಧಿ – 20,494 ಕೋಟಿ ರೂಪಾಯಿ
  •  ನಗರಾಭಿವೃದ್ಧಿ – 17,938 ಕೋಟಿ ರೂಪಾಯಿ
  •  ಕಂದಾಯ – 15,943 ಕೋಟಿ ರೂಪಾಯಿ
  •  ಒಳಾಡಳಿತ, ಸಾರಿಗೆ – 14,509 ಕೋಟಿ ರೂಪಾಯಿ
  •   ಇಂಧನ – 13,803 ಕೋಟಿ ರೂಪಾಯಿ
  • ಸಮಾಜ ಕಲ್ಯಾಣ – 11,163 ಕೋಟಿ ರೂಪಾಯಿ
  •  ಲೋಕೋಪಯೋಗಿ – 10,741 ಕೋಟಿ ರೂಪಾಯಿ
  •  ಕೃಷಿ, ತೋಟಗಾರಿಕೆ – 9,456 ಕೋಟಿ ರೂಪಾಯಿ
  •  ಮಹಿಳಾ, ಮಕ್ಕಳ ಕಲ್ಯಾಣ – 5,676 ಕೋಟಿ ರೂಪಾಯಿ
  •  ಆಹಾರ ವಲಯ – 4,600 ಕೋಟಿ ರೂಪಾಯಿ
  •  ವಸತಿ – 3,787 ಕೋಟಿ ರೂಪಾಯಿ
  • ಇತರೆ – 1,16,968 ಕೋಟಿ ರೂಪಾಯಿ

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top