ಬೆಂಗಳೂರು : ಬ್ರಿಟನ್ ರೂಪಾಂತರಿ ವೈರಸ್ ಸೋಂಕು ರಾಜ್ಯದಲ್ಲಿ ಏರಿಕೆಯಾಗಿದ್ದು, ಇಂದು ಮತ್ತೆ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ.
ಈ ಬಗ್ಗೆ ಐಸಿಎಂಆರ್ ವರದಿಯಲ್ಲಿ ಮಾಹಿತಿ ನೀಡಿದ್ದು, ಬ್ರಿಟನ್ ರೂಪಾಂತರಿ ಕೊರೊನಾ ವೈರಸ್ ರಾಜ್ಯದಲ್ಲಿ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ದೇಶದ ನಾಲ್ವರಿಗೆ ಬ್ರಿಟನ್ ರೂಪಾಂತರಿ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಬ್ರಿಟನ್ ವೈರಸ್ ಸೋಂಕಿತರ ಸಂಖ್ಯೆ 29ಕ್ಕೆ ಏರಿಕೆಯಾಗಿರುವುದಾಗಿ ತಿಳಿಸಿದೆ.
ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿರುವಂತೆ ನಾಲ್ವರು ಬ್ರಿಟನ್ ವೈರಸ್ ಸೋಂಕಿತರಲ್ಲಿ ಬೆಂಗಳೂರಿನ ಮೂವರು ಸೇರಿದ್ದಾರೆ ಎಂಬುದು ಮತ್ತೊಂದು ಆತಂಕದ ಸಂಗತಿಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಈ ಮೊದಲು 3 ಶಿವಮೊಗ್ಗದ 4 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಇಂದು ಬೆಂಗಳೂರಿನಲ್ಲಿ ಮತ್ತೆ ಮೂವರು ಸೇರಿದಂತೆ ಒಟ್ಟು 10 ಜನರಿಗೆ ಬ್ರಿಟನ್ ವೈರಸ್ ಸೋಂಕು ದೃಢಪಟ್ಟಂತಾಗಿದೆ.