ಬೆಂಗಳೂರು : ಶಾಲಾ-ಕಾಲೇಜು ಯಾವಾಗ ಆರಂಭಗೊಳ್ಳಲಿದೆ ಗ್ರೀನ್ ಸಿಗ್ನಲ್ ನೀಡಿದೆ. ಜನವರಿ 1ರಿಂದ 10ನೇ ತರಗತಿ ಹಾಗೂ 12ನೇ ತರಗತಿ ಆರಂಭಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅನುಮತಿ ನೀಡಿದ್ದಾರೆ. ಆದರೆ, ಈ ಬಾರಿ ಮಧ್ಯಾಹ್ನದ ಬಿಸಿಯೂಟ ಬ್ರೇಕ್ ಬಿದ್ದಿದ್ದು, ಮನೆಗಳಿಗೆ ಫುಡ್ ಕಿಟ್ಗಳನ್ನು ನೀಡುತ್ತೇವೆ ಅಂತ ಹೇಳಿದರು.
ಈ ಕುರಿತಂತೆ ಸಿಎಂ ಯಡಿಯೂರಪ್ಪ ಸಭೆಯ ನಂತರ ಮಾತನಾಡಿ, ಜನವರಿ 1ರಿಂದ 10 ಮತ್ತು 12ನೇ ತರಗತಿ ಆರಂಭಿಸಲಾಗುತ್ತಿದೆ. ಜನವರಿ 1ರಿಂದ 6 ರಿಂದ 9ನೇ ತರಗತಿ ವಿದ್ಯಾರ್ಥಿಳಿಗೆ ವಿದ್ಯಾಗಮ ಕಾರ್ಯಕ್ರಮದ ಮೂಲಕ ಶೈಕ್ಷಣಿಕ ಚಟುವಟಿಕೆ ಮುಂದುವರೆಸಲು ನಿರ್ಧರಿಸಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ಜನವರಿ 1ರಿಂದ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಸಚಿವ ಎಸ್. ಸುರೇಶ್ ಕುಮಾರ್ ಮಾತನಾಡಿ, ಬೋರ್ಡ್ ಪರೀಕ್ಷೆ ಇರುವುದರಿಂದ ಎಸ್ಸ್ಎಲ್ಸಿ ಮತ್ತು 12 ನೇ ತರಗತಿಗಳನ್ನು 2021ರ ಜನವರಿ 1ರಿಂದ ಪ್ರಾರಂಭಿಸಲಾಗುತ್ತದೆ. ಆದರೆ ವಿದ್ಯಾರ್ಥಿಗಳು ಶಾಲೆಗೆ ಬರೋದು ಕಡ್ಡಾಯವಲ್ಲ, ಇದಲ್ಲದೇ ಜನವರಿ 1ರಿಂದ ವಿದ್ಯಾಗಮ ಕೂಡ ನಡೆಲಿದ್ದು, ಇದು . ಶಾಲೆ ಆವರಣದಲ್ಲೇ ವಾರಕ್ಕೆ ಮೂರುದಿನ 6ರಿಂದ 9ನೇ ತರಗತಿ ನೀಡಲಾಗುತ್ತದೆ ಅಂಥ ತಿಳಿಸಿದರು. ಪರೀಕ್ಷೆ ಬಗ್ಗೆ ಪರಿಸ್ಥಿತಿ ನೋಡಿಕೊಂಡು ಉಳಿದ ತರಗತಿಗಳ ಬಗ್ಗೆ ಹಾಗೂ ಪಠ್ಯಕ್ರಮ ಪರಿಷ್ಕರಣೆ ಮಾಡಲಾಗುವುದು ಅಂತ ಹೇಳಿದರು. ಇಂದು ಸಂಜೆ ವಿದ್ಯಾರ್ಥಿಗಳ ವೇಳಾ ಪಟ್ಟಿ ನಿರ್ಧಾರವಾಗಲಿದೆ.



