ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮಳೆ ಅಬ್ಬರ ತುಸು ಜೋರಾಗಿದ್ದು, ಸತತ ಮಳೆಗೆ ಅಂಡರ್ ಪಾಸ್ ಗಳು ತುಂಬಿಕೊಂಡಿದ್ದರಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಕೆಆರ್ ವೃತ್ತದ ಕೆಳಸೇತುವೆಯಲ್ಲಿ ಮಳೆಯಿಂದ ಸಂಗ್ರಹಗೊಂಡಿದ್ದ ನೀರಿನಲ್ಲಿ ಸಿಲುಕಿದ ಬಾನು ರೇಖಾ (23) ಯುವತಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಉಳಿದ ಆರು ಮಂದಿ ಪಾರಾಗಿದ್ದಾರೆ. ಕಾರಿನಲ್ಲಿ ಒಟ್ಟು ಏಳು ಮಂದಿ ಪ್ರಯಾಣಿಸುತ್ತಿದ್ದರು.
ವಿಜಯವಾಡದ ಬಾನು ಅವರು ಇನ್ಪೊಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಕುಟುಂಬವು ಬೆಂಗಳೂರಿಗೆ ಬಂದಿತ್ತು. ಅವರಿಗೆ ಬೆಂಗಳೂರಿನ ವಿವಿಧ ಸ್ಥಳಗಳನ್ನು ತೋರಿಸಲು ಕಾರಿನಲ್ಲಿ ತೆರಳಿದ್ದರು. ಆಗ ಈ ಅನಾಹುತ ಸಂಭವಿಸಿದೆ.ಸೇಂಟ್ ಮಾರ್ಥಸ್ ಆಸ್ಪತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಮೃತ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.



