ಬೆಂಗಳೂರು: ಅಡಿಕೆ ಬೆಳೆ, ಉತ್ಪನ್ನದ ಕುರಿತು ಎಷ್ಟೇ ವಿರೋಧ ಅಭಿಪ್ರಾಯ, ವರದಿಗಳು ವ್ಯಕ್ತವಾದರೂ ಕೇಂದ್ರ ಸರ್ಕಾರ ಅದರ ಬಗ್ಗೆ ಚಿಂತಿಸದೆ, ಅಡಿಕೆ ಬೆಳೆ, ರೈತರ ಪರವಾಗಿ ಇರಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದ್ದಾರೆ.
ವಿಶ್ವ ಹವ್ಯಕ ಸಮ್ಮೇಳನದಲ್ಲಿ ಮಾತನಾಡಿ, ಅಡಿಕೆ ಹವ್ಯಕ ಸಮುದಾಯದ ಮೂಲ ಕೃಷಿ. ಮದುವೆಯಿಂದ ಶ್ರಾದ್ಧದವರೆಗೆ ಅಡಿಕೆ ಅತ್ಯಗತ್ಯ. ಆದರೆ, ಅಡಿಕೆ ಕುರಿತು ಅನೇಕ ರೀತಿಯ ವರದಿಗಳು ಬಂದಿವೆ. ಎಷ್ಟೇ ವರದಿಗಳು ಬಂದರೂ ಅಡಕೆ ಬೆಳೆಗಾರರು ಯಾವುದೇ ರೀತಿಯಲ್ಲೂ ಭಯಪಡುವ ಅವಶ್ಯಕತೆಯಿಲ್ಲ ಎಂದರು.
ಏನೇ ಸಮಸ್ಯೆಗಳು ಎದುರಾದರೂ ಕೇಂದ್ರ ಸರ್ಕಾರ ಅಡಕೆ ಬೆಳೆಗಾರರ ಪರವಾಗಿರಲಿದೆ ಪ್ರಹ್ಲಾದ್ ಜೋಶಿ ಭರವಸೆ ನೀಡಿದರು.



