ಶಿವಮೊಗ್ಗ: ಮುಂಗಾರು ಹಂಗಾಮಿನ ಬೆಳೆಗೆ ಭದ್ರಾ ಡ್ಯಾಂನ ಎಡ ಮತ್ತು ಬಲ ನಾಲೆಯ ನೀರು ಹರಿವನ್ನು ನ.20 ರಿಂದಲೇ ಸ್ಥಗಿತಗೊಳಿಸಿದ್ದು, ಬೇಸಿಗೆ ಬೆಳೆಗೆ ಜ.5ರಿಂದ ನಿರಂತರವಾಗಿ 125 ನೀರು ಹರಿಸುವ ಕುರಿತು ಮುಂದಿನ ತಿಂಗಳು ತೀರ್ಮಾನ ಕೈಗೊಳ್ಳಲಾಗುವುದು ಎಂದು ನೀರಾವರಿ ಸಲಹ ಸಮಿತಿ ತಿಳಿಸಿದೆ.
ಇತ್ತೀಚೆಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ತಗೆದುಕೊಂಡ ನಿರ್ಧಾರದಂತೆ ನೀರು ಸ್ಥಗಿತಗೊಳಿಸಲಾಗಿದೆ. ನಲ್ಲಿ ಸದ್ಯ 54.49 ಟಿಎಂಸಿ ನೀರು ಸಂಗ್ರಹವಾಗಿದ್ದು, ಕುಡಿಯುವ ನೀರು, ಕೈಗಾರಿಕೆಗೆ 07 ಟಿಎಂಸಿ ನೀರು ಮೀಸಲಿಟ್ಟಿದೆ. ಹೀಗಾಗಿ ಈ ವರ್ಷ 125 ದಿನ ಬೇಸಿಗೆ ಬೆಳೆಗೆ ನಿರಂತರ ನೀರು ಹರಿಯುವಷ್ಟು ಸಂಗ್ರಹವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿ 125 ದಿನವೂ ನೀರು ಹರಿಸಲು ಸಾಧ್ಯವಾಗಿದೆ.
ಭದ್ರಾ ಡ್ಯಾಂ ವ್ಯಾಪ್ತಿಯಲ್ಲಿ 75 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 10 ಸಾವಿರ, ಚಿಕ್ಕಮಗಳೂರು ಜಿಲ್ಲೆಯಲ್ಲಿ 5 ಹಾಗೂ ದಾವಣಗೆರೆ ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್ ನಲ್ಲಿ ಭತ್ತ ಬೆಳೆಯಲಾಗುತ್ತಿದೆ.



