ಬೆಳ್ತಂಗಡಿ: ಮನೆಯೊಂದರ ಸಮೀಪ ಮರ ತುಂಡರಿಸುವಾಗ ಮರ ಬಿದ್ದು ಮೂವರು ಮೃತಪಟ್ಟ ಘಟನೆ ಬೆಳ್ತಂಗಡಿಯ ಪಟ್ರಮೆಯಲ್ಲಿ ನಡೆದಿದೆ.
ಪಟ್ರಮೆ ಗ್ರಾಮದ ಅನಾರು ಬಳಿ ಮರವೊಂದನ್ನು ಕಡಿದು ಉರುಳಿಸುವ ವೇಳೆ ಮರದ ಅಡಿಗೆ ಸಿಲುಕಿ ಮೂವರು ಯುವಕರು ಮೃತಪಟ್ಟಿದ್ದಾರೆ.ಮೃತರನ್ನು ಪಟ್ರಮೆ ರಾಮಣ್ಣ ಕುಂಬಾರ ಅವರ ಪುತ್ರ ಪ್ರಶಾಂತ್ (21 ವ), ಸೇಸಪ್ಪ ಪೂಜಾರಿ ಅವರ ಪುತ್ರ ಸ್ವಸ್ತಿಕ್ (23 ವ) ಮತ್ತೋರ್ವ ಉಪ್ಪಿನಂಗಡಿಯ ಗಣೇಶ್ (38 ವ) ಎಂದು ತಿಳಿದುಬಂದಿದೆ.
ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ., ಧರ್ಮಸ್ಥಳ ಪೊಲೀಸ್ ಠಾಣೆ ಉಪನಿರೀಕ್ಷಕ ಪವನ್ ಕುಮಾರ್, ಸಿಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.



