ಶಿವಮೊಗ್ಗ: ಕಾಮಗಾರಿ ಬಿಲ್ ಗೆ ಸಹಿ ಮಾಡಲು 30 ಸಾವಿರ ಹಣಕ್ಕಾಗಿ ಬೇಡಿಕೆ ಇಟ್ಟು, ಹಣ ಸ್ವೀಕರಿಸುವಾಗಲೇ ಗ್ರಾಮ ಪಂಚಾಯತಿ ಅಧ್ಯಕ್ಷೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಶಿವಮೊಗ್ಗ ತಾಲೂಕಿನ ಮುದ್ದಿನ ಕೊಪ್ಪ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವೇಣಿಕಣ್ಣನ್ ಎಸಿಬಿ ಬಲೆಗೆ ಬಿದ್ದವರಾಗಿದ್ದಾರೆ. ಗುತ್ತಿಗೆದಾರ ಲೋಕೇಶ್ ಕಾಮಗಾರಿ ಬಿಲ್ ಗೆ ಸಹಿ ಹಾಕಲು ಎಂಬುವರಿಂದ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಗುತ್ತಿಗೆದಾರ ಎಸಿಬಿಗೆ ದೂರು ನೀಡಿದ್ದರು.ಗುತ್ತಿಗೆ ಹಣ ಬಿಡುಗಡೆಗೆ ರೂ.30 ಸಾವಿರ ಹಣವನ್ನು ವೇಣಿಕಣ್ಣನ್ ಗೆ ನೀಡಲು ಹೋದಸಂದರ್ಭದಲ್ಲಿ ಎಸಿಬಿ ಎಸ್ಪಿ ಜಯಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ಹಣ ಸಮೇತ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯನ್ನು ಎಸಿಬಿ ವಶಕ್ಕೆ ಪಡೆದಿದೆ.



