ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿದ್ದು. ರಾಜ್ಯದಲ್ಲಿ 14 ದಿನ ಟೈಟ್ ರೂಲ್ಸ್ ಹೇರಲಾಗಿದೆ. 6 ತಿಂಗಳು ಯಾವುದೇ ಚುನಾವಣೆ ನಡೆಸದಂತೆ ಚುನಾವಣೆ ಆಯೋಗಕ್ಕೆ ಮನವಿ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಸಚಿವ ಸಂಪುಟ ಸಭೆ ಮಾತನಾಡಿದ ಅವರು, ನಾಳೆ ರಾತ್ರಿ (ಏ.27) 9 ಗಂಟೆಯಿಂದ 14 ದಿನಗಳವರೆಗೆ ರಾಜ್ಯದಲ್ಲಿ ಟೈಟ್ಸ್ ರೂಲ್ಸ್ ಜಾರಿ ಇರಲಿದೆ. ಈ ಸಮಯದಲ್ಲಿ ರಾಜ್ಯದಲ್ಲಿ ಮುಂದಿನ ಆರು ತಿಂಗಳು ಯಾವುದೇ ಚುನಾವಣೆ ನಡೆಯಲ್ಲ. ಆಯೋಗಕ್ಕೆ ಎಲ್ಲ ಚುನಾವಣೆ ಮುಂದೂಡುವಂತೆ ಶಿಫಾರಸ್ಸು ಮಾಡುತ್ತೇವೆ ಎಂದು ತಿಳಿಸಿದರು.