ದಾವಣಗೆರೆ: ಮೈಸೂರು ಸಂಸ್ಥಾನಕ್ಕೆ ಕರ್ನಾಟಕ ರಾಜ್ಯವೆಂದು ಮರು ನಾಮಕರಣ ಮಾಡಿ ನವೆಂಬರ್ 1ಕ್ಕೆ 50 ವರ್ಷ (2023) ಪೂರ್ಣಗೊಳ್ಳುವ ಸಂಭ್ರಮ. ಈ ಸಂಭ್ರಮವನ್ನು ಇಡೀ ವರ್ಷ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಿದೆ. ಇದಕ್ಕೆ ಲಾಂಛನದ ಅವಶ್ಯಕತೆ ಅವಶ್ಯಕತೆವಿತ್ತು. ಈ ಲಾಂಛನ ವಿನ್ಯಾಸಳಿಸಲು ಸಾರ್ವಜನಿಕರಿಂದ ಅಹ್ವಾನ ನೀಡಿತ್ತು. ಸಾರತವಜನಿಕರು ವಿನ್ಯಾಸಗೊಳಿಸಿದ ನೂರಾರು ಲಾಂಛನಗಳಲ್ಲಿ ದಾವಣಗೆರೆಯ ಯುವಕನ ಲಾಂಛನವನ್ನು ಸರ್ಕಾರ ಆಯ್ಕೆ ಮಾಡಿ, ಅನಾವರಣಗೊಳಿಸಿದೆ.
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಆಯೋಜಿಸಿದ್ದ ನೂತನ ಲೋಗೋ ಸ್ಪರ್ಧೆಯಲ್ಲಿ ವಿಜೇತರಾದ ಕಲಾವಿದ ಶ್ರೀ ರವಿರಾಜ ಜಿ. ಹಲಗೂರ ಅವರಿಗೆ 25 ಸಾವಿರ ರೂ. ಬಹುಮಾನದ ಚೆಕ್ ವಿತರಿಸಲಾಯಿತು. pic.twitter.com/ep6ge75OPT
— DK Shivakumar (@DKShivakumar) October 17, 2023
ಕರ್ನಾಟಕ ನಕ್ಷೆಯಲ್ಲಿ ಅಂಬಾರಿ ಹೊತ್ತು ಗಾಂಭೀರ್ಯದಿಂದ ನಡೆಯುತ್ತಿರುವ ಆನೆಯ ಚಿತ್ರವಿರುವ ವಿನ್ಯಾಸದ ಲಾಂಛನವನ್ನು ದಾವಣಗೆರೆಯ ಜಯನಗರದ ಎ ಬ್ಲಾಕ್ ನಿವಾಸಿ ರವಿರಾಜ ಜಿ. ಹುಲಗೂರು ರಚನೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಲಾಂಛನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಹುಲಗೂರು ಅವರನ್ನು ಅಭಿನಂದಿಸಿದರು.25,000 ರೂ. ಬಹುಮಾನ ಮೊತ್ತವನ್ನೂ ಪ್ರದಾನ ಮಾಡಿದ್ದು, ಬಿಬಿಎಂಪಿ ವತಿಯಿಂದ 1 ಲಕ್ಷ ರೂ, ಬಹುಮಾನ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಈ ಲಾಂಛನದಲ್ಲಿ ಆನೆ ಮೇಲೆ ರಾಜನ ಬದಲಿಗೆ ಮೈಸೂರಿನ ಚಾಮುಂಡೇಶ್ವರಿ ಕೂತಿರುವಂತೆ ಬದಲಾವಣೆ ಮಾಡುವಂತೆ ಸೂಚಿಸಿದ್ದಾರೆ.