ಬೆಳಗಾವಿ: ಕಂದಾಯ ಇಲಾಖೆಯ ಸರ್ವೇ ವಿಭಾಗದ ಹಳೆ ಭೂ ದಾಖಲೆಗಳ ಸ್ಕ್ಯಾನಿಂಗ್ ಮಾಡಿ ಸಂರಕ್ಷಿಸುವ ಉದ್ದೇಶದಿಂದ ಪ್ರಾಯೋಗಿಕ 31 ತಾಲ್ಲೂಕುಗಳಲ್ಲಿ ಭೂ ಸುರಕ್ಷೆ ಯೋಜನೆ ಜಾರಿಗೊಳಿಸಿದ್ದು, ಇನ್ನೂಳಿದ 210 ತಾಲ್ಲೂಕುಗಳಿಗೂ ಈ ಯೋಜನೆ ವಿಸ್ತರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಸುನೀಲ್ ವಲ್ಯಾಪುರೆ ಅವರ ಪ್ರಶ್ನೆಗೆ ಉತ್ತರಿಸಿ, ಮೂಲ ದಾಖಲೆಗಳ ಸ್ಕ್ಯಾನಿಂಗ್ ಮಾಡುವ ಕಾರ್ಯ ಈಗಾಗಲೇ 31 ತಾಲ್ಲೂಕುಗಳಲ್ಲಿ ಪೂರ್ಣಗೊಂಡಿದೆ. 2025ರ ಡಿಸೆಂಬರ್ ಒಳಗೆ ಉಳಿದ ತಾಲೂಕಿನ ದಾಖಲೆಗಳು ಸ್ಕ್ಯಾನಿಂಗ್ ಆಗಲಿವೆ. ಜನರಿಗೆ ಆನ್‌ಲೈನ್‌ನಲ್ಲಿಯೂ ದಾಖಲೆ ಲಭ್ಯವಾಗಿದೆ. ಇದಕ್ಕಾಗಿ ತಾಲ್ಲೂಕಿಗೊಂದು ಕಾಂಪ್ಯಾಕ್ಟರ್ ನೀಡಲಾಗುತ್ತಿದೆ ಎಂದು ತಿಳಿಸಿದರು.



