ಸ್ವ-ಉದ್ಯೋಗಾಕಾಂಕ್ಷಿಗಳಿಗೆ ಉಜಿರೆಯ ರುಡ್ ಸೆಟ್ ಸಂಸ್ಥೆಯಿಂದ ಉಚಿತ ಮೋಟಾರ್ ರಿವೈಂಡಿಂಗ್, ಎಸಿ ಫ್ರಿಡ್ಜ್ ರಿಪೇರಿ, ಆಭರಣಗಳ ತಯಾರಿಕೆ ಸೇರಿ ವಿವಿಧ ತರಬೇತಿ ಕೋರ್ಸ್ ಅರ್ಜಿ ಆಹ್ವಾನಿಸಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ, ಎಸ್ ಡಿಎಮ್‌ಇ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಜೊತೆಯಾಗಿ ಸ್ಥಾಪಿಸಿರುವ ರುಡ್‌ಸೆಟ್ ಸಂಸ್ಥೆ ನಿರುದ್ಯೋಗ ಯುವಕ ಯುವತಿಯರಿಗೆ ಮತ್ತು ಉದ್ಯೋಗ ಆಕಾಂಕ್ಷಿಗಳಿಗೆ ಸ್ವ-ಉದ್ಯೋಗ ಒದಗಿಸುವಿದು ಮುಖ್ಯ ಉದ್ದೇಶವಾಗಿದೆ.
- ಉಚಿತ ತರಬೇತಿ ವಿವರ
- ಕೃತಕ ಆಭರಣಗಳ ತಯಾರಿಕೆ – ದಿನಾಂಕ 18.12.2023 80 30.12.2023 (13 ದಿನ)
- ಮೋಟಾರ್ ರಿವೈಂಡಿಂಗ್ – ದಿನಾಂಕ 04.01.2024 ರಿಂದ 02.02.2024ರವರೆಗೆ (30 ದಿನಗಳು)
- ಜೇನು ಸಾಕಾಣಿಕೆ – 04 08.01.2024 80 17.01.202483 (10 )
- ಎಸಿ ಮತ್ತು ಫ್ರಿಡ್ಜ್ ರಿಪೇರಿ – 0 19.01.2024 80 17.02.20248 (30 ದಿನ)
- ಗ್ರಾಮೀಣ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ದಿನಾಂಕ 05.02.2024 ರಿಂದ 17.02.2024ರವರೆಗೆ (13 ದಿನಗಳು)
ಇದರ ಜೊತೆ ಮುಂದಿನ ದಿನಗಳಲ್ಲಿ ಕೃಷಿ ಉದ್ಯಮಿ, ಮೊಬೈಲ್ ಫೋನ್ ರಿಪೇರಿ, ಮೆನ್ಸ್ ಪಾರ್ಲರ್ ಸೇರಿ ಮೋದಲಾದ ತರಬೇತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಎಲ್ಲಾ ತರಬೇತಿಗಳು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು 18 ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕ/ಯುವತಿಯರು ರುಡ್ ಸೆಟ್ ಸಂಸ್ಥೆಯ email – ujirerudseti@gmail.com ಗೆ ಸಲ್ಲಿಸಬಹುದು, ವಾಟ್ಸಪ್ ಮೂಲಕ ಅರ್ಜಿ ಸಲ್ಲಿಸುವವರು ಮೊಬೈಲ್ ನಂ. 6364561982 ಗೆ ಸಲ್ಲಿಸಬಹುದು.
ನೇರವಾಗಿ ಕೂಡ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಬಿಳಿ ಹಾಳೆಯಲ್ಲಿ ಅರ್ಜಿಯನ್ನು ಬರೆದು, ನಿರ್ದೇಶಕರು ರುಡ್‌ಸೆಟ್ ಸಂಸ್ಥೆ, ಸಿದ್ದವನ ಉಜಿರೆ 574240, ಇವರಿಗೆ ಕಳ್ಳಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9591044014, 9902594791 ದೂರವಾಣಿ ಸಂಖ್ಯೆ 08256-236404, ಅಥವಾ ಆನ್ ಲೈನ್ ನಲ್ಲಿ https://forms.gle/Z2xPLEIFigamcMBd9 ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.