ಬೆಂಗಳೂರು: ಸಿಡಿ ಲೇಡಿ ಎರಡನೇ ವಿಡಿಯೋ ಬಿಡುಗಡೆ ಮಾಡಿದ ನಂತರ ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯಿಸಿದ್ದು, ಇಂತಹ 10 ಸಿಡಿ ಬಂದ್ರೂ ನಾನು ಹೆದರಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಆರೋಪ ಮುಕ್ತನಾಗಿ ಬರುವ ವಿಶ್ವಾಸವಿದೆ. ಸೂಕ್ತ ತನಿಖೆ ನಂತರ ವಿಡಿಯೋ ಹಿಂದಿನ ಮಹಾ ನಾಯಕ ಯಾರು ಎಂಬುದು ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಇದೊಂದು ದೊಡ್ಡ ಕುತಂತ್ರ. ನನ್ನ ಬಳಿಯೂ ಸೂಕ್ತ ದಾಖಲೆ ಇದೆ. ನನ್ನ ಕಿಸೆಯಲ್ಲಿಯೇ ಸಾಕ್ಷ್ಯ ಇದೆ. ಈ ದಾಖಲೆ ಬಿಟ್ಟರೆ ನೀವು ಕೂಡ ಶಾಕ್ ಆಗ್ತೀರಿ. ಈ ಪ್ರಕರಣದಲ್ಲಿ ಯುವತಿಯ ಹೇಳಿಕೆ ನೋಡಿದರೆ, ಇದೊಂದು ದೊಡ್ಡ ಷಡ್ಯಂತ್ರ ಎಂದು ಗೊತ್ತಾಗಲಿದೆ.
ನಾನು ಆರೋಪ ಮುಕ್ತರಾಗಿ ಬರುವ ವಿಶ್ವಾಸವಿದೆ. ಮಾಧ್ಯಗಳ ಮುಂದೆ ಮಾತನಾಡದಂತೆ ನಿರ್ಧರಿಸಿದ್ದೆ, ಆದರೆ, ಅನಿವಾರ್ಯ ಕಾರಣದಿಂದ ಮಾತನಾಡುತ್ತಿದ್ದೇನೆ. ಪ್ರಕರಣಕ್ಕೆ ಸಬಂಧಿಸಿದ್ದಂತೆ ನಮ್ಮ ವಕೀಲರು ಸೂಕ್ತ ದಾಖಲೆ ಸಂಗ್ರಹಿಸಿದ್ದಾರೆ. ಸಿದ್ದರಾಮಯ್ಯ ಮೇಲೆ ಬಹಳ ಗೌರವ ಇತ್ತು. ಅವರ ಹೇಳಿಕೆ ನೀಡಿ ನನಗೆ ಶಾಕ್ ಆಯ್ತು ಎಂದಿದ್ಧಾರೆ. ಅವರಿಗೆ ದೇವರು ಒಳ್ಳೆದು ಮಾಡಲಿ ಎಂದರು.



