ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಕ್ಷಣ, ಕ್ಷಣಕ್ಕೂ ಟ್ವಿಸ್ಟ್ ಪಡೆದುಕೊಂಡಿದೆ. ಪ್ರಕರಣ ಕುರಿತು ಪೋಷಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಾತ್ರ ಇದೆ ಎಂದು ಆರೋಪ ಮಾಡುತ್ತೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ.
ಏಕ ವಚನದಲ್ಲಿಯೇ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಮಹಾನ್ ನಾಯಕ ಯಾರು ಅಂತ ನಾನು ಹೇಳಬೇಕಿಲ್ಲ. ಯುವತಿ ಪೋಷಕರೇ ಮಹಾ ನಾಯಕ ಯಾರು ಎಂದು ಹೇಳಿದ್ದಾರೆ. ಹೀಗಾಗಿ ಮಹಾನಾಯಕ ಡಿ.ಕೆ. ಶಿವಕುಮಾರ್ ರಾಜಕಾಣದಲ್ಲಿ ಇರಲು ನಾಲಾಯಕ್ . ಡಿ.ಕೆ. ಶಿವಕುಮಾರ್ ಗಂಡಸಲ್ಲ , ಗಾ…, ನಾನು ಗಂಡಸು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಡಿಕೆಶಿ ವಿರುದ್ಧ ದೂರು ದಾಖಲಿಸುತ್ತೇನೆ. ಕನಕಪುರದಲ್ಲಿ ಅವರ ಸೋಲಿಗೆ ಹೋರಾಡುತ್ತೇನೆ. ಬೆಳಗಾವಿಗೆ ಡಿ.ಕೆ. ಶಿವಕುಮಾರ್ ಬಂದರೆ ಸ್ವಾಗತ ಕೋರುತ್ತೇನೆ . ಷಡ್ಯಂತ್ರದಲ್ಲಿ ಮಹಾನಾಯಕ ಇಲ್ಲ ಎಂದುಕೊಂಡಿದ್ದೆ. ನನ್ನ ಬಳಿ 11 ಸಾಕ್ಷ್ಯಗಳಿವೆ. ಅವುಗಳನ್ನು ಎಸ್‌ಐಟಿಗೆ ಕೊಡುತ್ತೇನೆ. ಆತ ರಾಜಕೀಯದಿಂದ ನಿವೃತ್ತಿ ಹೊಂದಲಿ. ಡಿಕೆಶಿ ವಿರುದ್ದ ಅಟ್ರಾಸಿಟಿ ದೂರು ದಾಖಲಿಸುತ್ತೇನೆ ಎಂದು ಕಿಡಿಕಾರಿದರು.



