ಮೈಸೂರು : ನಾನು ಇಲ್ಲಿ ತನಕ ಗೋ, ಹಂದಿ ಮಾಂಸ ತಿಂದಿಲ್ಲ. ಒಂದು ವೇಳೆ ತಿನ್ನಬೇಕು ಅನ್ನಿಸಿದ್ರೆ ತಿನ್ನುವೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇಲ್ಲಿ ತನಕ ಗೋ, ಹಂದಿ ಮಾಂಸ ತಿಂದಿಲ್ಲ ಒಂದು ವೇಳೇ ತಿನ್ನಬೇಕು ಅಂತ ಅನ್ನಿಸಿದರೇ ತಿನ್ನುವೇ, ಆಹಾರ ಪದ್ದತಿ ನನ್ನ ಹಕ್ಕು, ಅದನ್ನು ಯಾರು ಕೂಡ ಪ್ರಶ್ನೆ ಮಾಡುವಂತಿಲ್ಲ ಎಂದು ಹೇಳಿದರು.
,ನಾನು ತಿಂದಿರುವುದು ಕೋಳಿ ಮಾಂಸ, ಕುರಿ ಮಾಂಸ, ಆಡಿನ ಮಾಂಸ ಮಾತ್ರ. ನಾನು ಯಾರಿಗೂ ಇದನ್ನು ತಿನ್ನಿ, ಇದನ್ನು ತಿನ್ನಬೇಡಿ ಅಂತ ಹೇಳಿಲ್ಲ. ನನಗೆ ಬೇಕಾಗಿರೋದನ್ನು ನಾನು ತಿನ್ನುವ ಹಕ್ಕು ನನಗೆ ಇದೆ ಎಂದಿದ್ದಾರೆ.



