ಬೆಂಗಳೂರು: ಕರ್ನಾಟಕದಲ್ಲಿ ಆಪರೇಷನ್ ಕಮಲ ಹುಟ್ಟು ಹಾಕಿದವರು ಯಾರು? ಇದರ ಜನಕ ಯಾರಾದರೂ ಇದ್ದರೇ, ಅದು ಮಿಸ್ಟರ್ ಯಡಿಯೂರಪ್ಪ. ಪಾಪದ ಹಣ ಖರ್ಚು ಮಾಡಿ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನ ಸೆಳೆದು ಸರ್ಕಾರ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ ಕಿಡಿಕಾರಿದರು.
ರಾಜ್ಯಪಾಲರ ವಂದನಾ ನಿರ್ಣಯದ ಭಾಷಣ ಮಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ರಾಜ್ಯ ಸರ್ಕಾರ ಡಕೋಟಾ ಎಕ್ಸ್‌ಪ್ರೆಸ್ ಸಿನಿಮಾದ ಬಸ್ ನಂತಾಗಿದ್ದು, ರಸ್ತೆಯಲ್ಲೇ ಡಕೋಟಾ ಬಸ್ ರೀತಿ ಕೆಟ್ಟು ಹೋಗಿದೆ. ಗೇರ್ ಹಾಕೋಕೆ ಆಗೋದಿಲ್ಲ, ಹಾಕಿದ್ರು ಗೇರ್ ಕಿತ್ತಿಕೊಂಡು ಬರುತ್ತೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರ ರಾಜ್ಯಪಾಲರ ಭಾಷಣದ ಸುಳ್ಳುಗಳನ್ನು ಹೇಳಿಸಿದೆ. ಭಾಷಣದಲ್ಲಿ ಸತ್ಯ, ಮುಂದಾಲೋಚನೆ ಇಲ್ಲ. ದೂರದೃಷ್ಟಿ ಕೂಡ ಇಲ್ಲ. ನಮ್ಮ ಯೋಜನೆಗಳನ್ನೇ ಭಾಷಣದಲ್ಲಿ ಪ್ರಸ್ತಾಪ ಮಾಡಿ ನಮ್ಮ ಸಾಧನೆಯನ್ನೇ ಅವರು ಹೇಳಿಕೊಂಡಿದ್ದಾರೆ. ಇದು ಚುನಾಯಿತ ಸರ್ಕಾರ ಮಾಡುವ ಕೆಲಸವಲ್ಲ ಎಂದು ಕಿಡಿಕಾರಿದರು.
ರಾಜ್ಯಪಾಲರಿಗೆ ಘನತೆ, ಗೌರವ ಇರುತ್ತೆ. ಸರ್ಕಾರ ರಾಜ್ಯಪಾಲರಿಂದ ಸುಳ್ಳು ಹೇಳಿಸಿದೆ. ವಸ್ತುಸ್ಥಿತಿ ಏನಿದೆಯೋ ಅದನ್ನ ಹೇಳಿಸಬೇಕು.ಇನ್ನು ಸಿಎಂ ವಿರುದ್ದವೂ ಹರಿಹಾಯ್ದರು. ಇದೊಂದು ಅನೈತಿಕವಾಗಿ ಹುಟ್ಟಿದ ಅಂಗ ವೈಫಲ್ಯ ಸರ್ಕಾರ. ಈ ರೀತಿ ಹುಟ್ಟಿರುವ ಸರ್ಕಾರದಿಂದ ಏನು ನಿರೀಕ್ಷೆ ಮಾಡಲು ಸಾಧ್ಯ. ನಮ್ಮ ಸರ್ಕಾರ ಅಡಳಿತದಲ್ಲಿ ಇದ್ದಾಗ ಸರ್ಕಾರ ಇನ್ನು ಟೇಕ್ ಆಫ್ ಆಗಿಲ್ಲ ಅಂತಾ ಬಿಜೆಪಿಯವರು ಹೇಳ್ತಿದ್ರು. ಈಗ ಅವರ ಸರ್ಕಾರ ಟೇಕ್ ಆಫ್ ಅಲ್ಲಾ , ಆಫ್ ಆಗಿದೆ ಎಂದರು.



