ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಬಯಲು ಪ್ರಕರಣ ಸಂಬಂಧ ಸಚಿವ ಎಸ್.ಟಿ. ಸೋಮಶೇಖರ್ ಹೊಸ ಬಾಂಬ್ ಸಿಡಿಸಿದ್ದು, ಸಿಡಿ ಮಾಡಿಸಿದ್ದು ಕಾಂಗ್ರೆಸ್ ನವರೇ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ಯನ್ನು ಮಾಡಿದ್ದು ಕಾಂಗ್ರೆಸ್ ನವರೇ, ಮತ್ಯಾರು ಮಾಡ್ತಾರೆ. ಇಂತಹ ಮನೆಹಾಳ್ ಕೆಲಸ ಮಾಡೋದು ಕಾಂಗ್ರೆಸ್ ನವರೇ ಎಂದು ಗಂಭೀರ ಆರೋಪಿಸಿದರು. ನಾನು 20 ವರ್ಷ ಕಾಂಗ್ರೆಸ್ ಪಕ್ಷದಲ್ಲೇ ಇದ್ದವನು, ಅವರು ಏನು ಮಾಡುತ್ತಾರೆಂದು ನನಗೆ ಚೆನ್ನಾಗಿ ಗೊತ್ತಿದೆ. ಸಿಡಿ ಪ್ರಕರಣವನ್ನು ಸಿಬಿಐ ಗೆ ಕೊಡಲಿ ಎಂದು ಒತ್ತಾಯಿಸಿದ್ದೇನೆ ಎಂದರು.
ರಾಜಕೀಯವಾಗಿ ಸವಾಲು ಹಾಕಲಿ, ತಾಕತ್ತಿದ್ದರೆ ನನ್ನ ಹಾಗೂ ರಮೇಶ್ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಲಿ ಎಂದು ಸವಾಲು ಹಾಕಿದ್ದಾರೆ. ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಿಂದ ಅವರ ಮಾನ-ಮರ್ಯಾದೆ ಏನಾಯಿತು. ರಾಜಕೀಯ ಷಡ್ಯಂತ್ರದಿಂದ ಮಾನ ಹಾನಿಯಾಗಬಾರದು. ಹೀಗಾಗಿ ನಾವು ಆರು ಜನ ಸಚಿವರು ಕೋರ್ಟ್ ಗೆ ಮೊರೆ ಹೋಗಿದ್ದೇವೆ ಎಂದು ತಿಳಿಸಿದರು.



