ಬೆಂಗಳೂರು: ನಾನು ಇಂತಹ ಬಹಳ ನೋಟಿಸ್ ನೋಡಿದ್ದೇನೆ. ಈಗಾಗಲೇ 3 ಬಾರಿ ಪಕ್ಷದಿಂದ ಉಚ್ಚಾಟನೆ ಸಹ ಮಾಡಿದ್ದಾರೆ. ನನಗೆ ಇದು ಹೊಸದೇನು ಅಲ್ಲ. ಅದಕ್ಕೆ ಬೇಕಾದ ಉತ್ತರವನ್ನೂ ನಾನು ಕೊಡ್ತೇನೆ ಎಂದು ಬಜೆಪಿ ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿ ಶಿಸ್ತು ಸಮಿತಿಯಿಂದ ನೋಟಿಸ್
ಪದೇ ಪದೇ ಮುಖ್ಯಮಂತ್ರಿ ಮತ್ತು ಪಕ್ಷದ ವಿರುದ್ಧ ಮಾತನಾಡುತ್ತಿದ್ದ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ನೋಟಿಸ್ ನೀಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಇದುವರೆಗೂ ಯಾವುದೇ ನೋಟಿಸ್ ನನ್ನ ಕೈಸೇರಿಲ್ಲ. ನಾನು ಪಕ್ಷದ ವಿರುದ್ಧ ಯಾವುದೇ ಕೆಲಸವನ್ನೂ ಮಾಡಿಲ್ಲ. ಪಕ್ಷದ ರಾಷ್ಟ್ರೀಯ ನಾಯಕರ ವಿರುದ್ಧವೂ ಹೇಳಿಕೆ ಕೊಟ್ಟಿಲ್ಲ. ನಾನು ಯಾವುದಕ್ಕೂ ಅಂಜಲ್ಲ. ಶಾಕ್ ಅನ್ನೋ ಪದ ನನ್ನ ಶಬ್ದಕೋಶದಲ್ಲಿ ಇಲ್ಲ. ನಾನು ಸತ್ಯದ ಪರವಾಗಿ ಹೋರಾಟವನ್ನ ಮಾಡುತ್ತಿದ್ದೇನೆ. ನಾನು ಯಾವುದೇ ಕ್ಷಮೆ ಕೇಳಲ್ಲ. ವಿಷಾದ ವ್ಯಕ್ತಪಡಿಸುವ ವ್ಯಕ್ತಿ ಅಲ್ಲ ಎಂದರು.



