ದಾವಣಗೆರೆ: ಜಿಲ್ಲೆಯಲ್ಲಿ ಮಂಗಳೂರು ರಿಟೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (MRPL) ಭಾರತ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದ್ದು, ಜಿಲ್ಲೆಯ ತಾಲ್ಲೂಕುಗಳಲ್ಲಿ ರಿಟೇಲ್ ಔಟ್‍ಲೆಟ್‍ಗಳನ್ನು ತೆರೆಯಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ತಣಿಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಸ್‍ಹೆಚ್76 ರಸ್ತೆಯಲ್ಲಿ, ಜಗಳೂರು ಪಟ್ಟಣ ಪಂಚಾಯತಿ ವ್ಯಾಪ್ತಿಯ ಚಳ್ಳಕೆರೆ ಗೇಟ್ ಬಸ್ ನಿಲ್ದಾಣದ 2 ಕಿ.ಮಿ ಒಳಗೆ ಜಗಳೂರು ದಾವಣಗೆರೆ ಮಾರ್ಗದ ಎಸ್‍ಹೆಚ್ 65 ರಸ್ತೆಯಲ್ಲಿ ಮತ್ತು ಜಗಳೂರು-ಕೊಟ್ಟೂರು ಮಾರ್ಗದಲ್ಲಿನ 02 ಕಿ.ಮಿ ಒಳಗೆ ನೆಹರು ರಸ್ತೆಯಲ್ಲಿ, ಚನ್ನಗಿರಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಎನ್‍ಹೆಚ್ 369 ರಸ್ತೆಯಲ್ಲಿ, ಹಳೇಬಾತಿಯ ತುಂಗಭದ್ರ ಬಡಾವಣೆ ಹತ್ತಿರದಲ್ಲಿ, ಸವಳಂಗ ಪಂಚಾಯತ್ ವ್ಯಾಪ್ತಿಯ ಸವಳಂಗ-ನ್ಯಾಮತಿ ಎಸ್‍ಹೆಚ್ 52 ರಸ್ತೆಯಲ್ಲಿ, ಮುದಹದಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಮನೂರು-ಮಲೆಬೆನ್ನೂರು ರಸ್ತೆಯಲ್ಲಿ ರಿಟೇಲ್ ಔಟ್ ಲೆಟ್‍ಗಳನ್ನು ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಏಪ್ರಿಲ್ 23 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ www.mrpl.co.in ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.



