ದಾವಣಗೆರೆ: ಸಂಪುಟ ವಿಸ್ತರಣೆ ಬಗ್ಗೆ ಗುಂಪುಗಾರಿಕೆ ಮಾಡದಂತೆ ಎಲ್ಲಾ ಶಾಸಕರಿಗೆ ಗೃಹ ಸಚಿವ ಅಮಿತಾ ಶಾ ಸೂಚನೆ ನೀಡಿದ್ಧಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಶಾಸಕರು ತಮ್ಮ ಅಸಮಾಧಾನ ಏನೇ ಇದ್ದರೂ ಪಕ್ಷದ ರಾಜ್ಯದ ಅಧ್ಯಕ್ಷರ ಬಳಿ ಹೇಳಬೇಕು. ಅದನ್ನು ಹೊರತುಪಡಿಸಿ ಗುಂಪುಗಾರಿಕೆ ಮಾಡುವಂತಿಲ್ಲ. ರೇಣುಕಾಚಾರ್ಯ ಅವರಿಗೆ ಬಹುದಿನದಿಂದ ಮಂತ್ರಿಯಾಗಬೇಕೆಂಬ ಆಸೆ ಇದೆ. ಆದರೆ, ಅವರು ಬಹಿರಂಗವಾಗಿ ಹೇಳಿಕೆ ಕೊಡುವುದನ್ನು ಬಿಟ್ಟು ಪಕ್ಷದ ಚೌಕಟ್ಟಿನಲ್ಲಿ ನಾಲ್ಕು ಗೋಡೆ ಮಧ್ಯೆ ಕೊಡಬೇಕಿತ್ತು ಎಂದರು.
ನಮ್ಮದು ಬಹುಮತದ ಸರ್ಕಾರವಾಗಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ. ಸಮ್ಮಿಶ್ರ ಸರ್ಕಾರ ಧಿಕ್ಕರಿಸಿ ಬಂದವರಿಗೆ ನ್ಯಾಯ ಒದಗಿಸಬೇಕಿತ್ತು. ಆ ಕಾರಣದಿಂದ ಕೆಲವರಿಗೆ ಅವಕಾಶ ನೀಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಅವಕಾಶ ಸಿಗುತ್ತದೆ ಎಂದು ತಿಳಿಸಿದರು.



