ಬೆಂಗಳೂರು: ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಕ್ಷಣ ಕ್ಷಣಕ್ಕೂ ತಿರುವು ಪಡೆಯುತ್ತಿದ್ದು, ನರೇಶ್ ನಮ್ಮ ಹುಡುಗ, ಪಾಪ ಹೆಣ್ಣು ಮಗಳು ನನ್ನನ್ನು ಭೇಟಿ ಮಾಡಲು ಪ್ರಯತ್ನಿಸಿದ್ದು ನಿಜ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ನಾವು ರಾಜಕಾಣಿಗಳು. ಜನರ ಮಧ್ಯೆ ಇದ್ದೇವೆ. ನಾವು ಒಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದೇವೆ. ಯಾರದರೂ ಸಮಸ್ಯೆ ಹೇಳಿಕೊಂಡು ಬರುವುದು ಸಮಾನ್ಯ. ಯುವತಿ ಭೇಟಿ ಮಾಡುತ್ತೇನೆ ಎಂದು ಹೇಳಿರಬಹುದು. ದಿನ ಬೆಳಗಾದರೂ, ಇಂತಹ ಅನೇಕ ಸಮಸ್ಯೆಗಳು ಬರುತ್ತವೆ. ಹೀಗಾಗಿ ಯುವತಿ ಬಂದಿರಬಹುದು ಎಂದು ಹೇಳಿಕೆ ನೀಡಿದ್ದಾರೆ.
ಇನ್ನು ನಮ್ಮ ಪಕ್ಷದ ಐದು ಜನರನ್ನು ಸೆಳೆದುಕೊಂಡು ರಮೇಶ್ ಜಾರಕಿಹೊಳಿ ಹೋಗುಗ್ತಿದ್ದರು ಎಂದು ಗೊತ್ತಾದಾಗ ನಾವು ಅವರನ್ನು ಟ್ರ್ಯಾಕ್ ಮಾಡಿದ್ದು ನಿಜ. ಆದರೆ, ಸಿಡಿ ಪ್ರಕರಣ ವೈಯಕ್ತಿಕ ವಿಚಾರ. ಇದರಲ್ಲಿ ನಮ್ಮ ಪಾತ್ರ ಇಲ್ಲ. ನರೇಶ್ ನಮ್ಮ ಹುಡುಗ. ಮಾಧ್ಯಮದಲ್ಲಿ ಇರುವವನು. ನನಗೆ ಬೇಕಾದವನು. ಅವನ ಮನೆಗೂ ನಾನು ಹೋಗಿದ್ದೇನೆ. ಅವನು ನಮ್ಮ ಮನೆಗೆ ಬಂದಿದ್ದಾನೆ ಎಂದು ಹೇಳಿದ್ದಾರೆ. ರಮೇಶ್ ಜಾರಕಿಹೊಳಿಗೆ ಒಳ್ಳೆದು ಆಗಲಿ, ತನಿಖಾಧಿಕಾರಿಗಳು ಚನ್ನಾಗಿ ತನಿಖೆ ನಡೆಸುತ್ತಿದ್ದಾರೆ. ನೋಡೋಣ ಏನು ಆಗುತ್ತೆ ಅಂತಾ… ಎಂದಿದ್ದಾರೆ.



