ಕಲಬುರಗಿ: ಸಾರಿಗೆ ನೌಕರ ಮುಷ್ಕರ 7ನೇ ದಿನಕ್ಕೆ ಮುಂದುವರೆದಿದ್ದು, ಕಲಬುರಗಿಯಲ್ಲಿ ಸರ್ಕಾರಿ ಬಸ್ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಬಸ್ ಗೆ ಹಾನಿಯಾಗಿದ್ದು, ಮೂವರು ನೌಕರನ್ನು ವಶಕ್ಕೆ ಪಡೆಯಲಾಗಿದೆ.
ವಾಡಿ ಪಟ್ಟಣದ ಬಳಿಯ ರಾಮಚೌಕ್ ನಲ್ಲಿ ಬಸ್ ಗೆ ಕಲ್ಲು ತೂರಾಟ ನಡೆಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಡಂ ಡಿಪೋದ ವಿಶ್ವನಾಥ್ ಚೌವ್ಹಾಣ್, ಚಿತ್ತಾಪುರ ಡಿಪೋದ ಬಸವರಾಜ್ ಜಾಧವ್, ಅಶೋಕ್ ಮೇಲಕೇರಿ ಬಂಧಿತರು.



